ಅಪ್ಪು ಕನಸಿನ ಚಿತ್ರ ‘ಗಂಧದಗುಡಿ’ಗೆ ಶುಭಕೋರಿದ ಪ್ರಧಾನಿ ಮೋದಿ

Social Share

ಬೆಂಗಳೂರು,ಅ.9- ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್( ಅಪ್ಪು) ಪ್ರಪಂಚದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ವಾಸಿಸುತ್ತಿದ್ದಾರೆ. ಅವರು ತೇಜಸ್ಸಿನ ವ್ಯಕ್ತಿತ್ವ ಮತ್ತು ಅಪ್ರತಿಮ ಪ್ರತಿಭೆಯುಳ್ಳ ವ್ಯಕ್ತಿಯಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್‍ರವರ ಕೊನೆಯ ಸಾಕ್ಷಚಿತ್ರ ಗಂಧದಗುಡಿಗೆ ಶುಭಕೋರಿದ ಮೋದಿ, ಗಂಧದಗುಡಿ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ಸಂರಕ್ಷಣೆಗೆ ಸಂದ ಗೌರವವಾಗಿದೆ. ಈ ಪ್ರಯತ್ನಕ್ಕೆ ನನ್ನ ಶುಭಾಶಯಗಳು ಎಂದು ಟೀಟ್ಟ್ ಮಾಡಿದ್ದಾರೆ.

ಪುನೀತ್ ರಾಜ್‍ಕುಮಾರ್‍ರವರ ಪತ್ನಿ ಅಶ್ವಿನಿ ಅವರು ಪ್ರಧಾನಿಯವರಿಗೆ ಗಂಧದಗುಡಿ ಟ್ರೈಲರ್ ಟ್ಯಾಗ್ ಮಾಡಿ, ಇದು ಅಪ್ಪು ಅವರ ಹೃದಯಕ್ಕೆ ಹತ್ತಿರವಾದ ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತಿರುವ ನಮಗೆ ಇಂದು ಭಾವನಾತ್ಮಕ ದಿನ. ಅಪ್ಪು ಯಾವಾಗಲೂ ನಿಮ್ಮೊಂದಿಗಿನ ಸಂವಾದಗಳನ್ನು ಆಲಿಸುತ್ತಿದ್ದರು ಮತ್ತು ನಿಮ್ಮೊಂದಿಗೆ ವೈಯಕ್ತಿಕವಾಗಿ ಹಂಚಿಕೊಳ್ಳಲು ಇಷ್ಟಪಡುತ್ತಿದ್ದರು ಎಂದು ಹೇಳಿದ್ದಾರೆ.

ಅಪ್ಪು ನಮ್ಮ ಮಧ್ಯೆ ಇಲ್ಲ, ಆದರೆ ಅವರ ಜೀವನ ಮತ್ತು ಕೆಲಸವು ನಮಗೆ ವಸುಧೈವ ಕುಟುಂಬಕಂ ಎಂಬ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ ಎಂದಿದ್ದಾರೆ.

ಗಂಧದಗುಡಿ ಚಿತ್ರವೂ ನಮ್ಮ ನೆಲದ ಶ್ರೀಮಂತ ಪರಂಪರೆ, ಸಂಸ್ಕೃತಿ, ಪ್ರಕೃತಿ ಮತ್ತು ವೈವಿಧ್ಯತೆಗೆ ಕನ್ನಡಿ ಹಿಡಿದಿದೆ ಎಂದು ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂದು ಗಂಧದಗುಡಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಈ ಚಿತ್ರವು ಅಕ್ಟೋಬರ್ 28ಕ್ಕೆ ತೆರೆ ಕಾಣಲಿದೆ.

Articles You Might Like

Share This Article