ಅ.12ರವರೆಗೆ ಮುಂದುವರೆಯಲಿದೆ ಮೋದಿ ಸ್ಮರಣಿಕೆಗಳ ಹರಾಜು ಪ್ರಕ್ರಿಯೆ

Social Share

ನವದೆಹಲಿ, ಅ.8-ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಡೆದಿರುವ ಸ್ಮರಣಿಕೆಗಳ ಹರಾಜು ಪ್ರಕ್ರಿಯೆ ಅ.12ರವರೆಗೆ ಮುಂದುವರೆಯಲಿದೆ. ಸ್ಮರಣಿಕೆಗಳ ಹರಾಜು ಅ.12 ರಂದು ಮುಕ್ತಾಯಗೊಳ್ಳುತ್ತದೆ.

ನವದೆಹಲಿಯಲ್ಲಿರುವ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‍ಗೆ ಭೇಟಿ ನೀಡಿ ಸ್ಮರಣಿಕೆಗಳನ್ನು ಖರೀದಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಹರಾಜಿನಿಂದ ಬರುವ ಆದಾಯವನ್ನು ನಮಾಮಿ ಗಂಗೆ ಯೋಜನೆಗೆ ಬಳಸಲಾಗುವುದು ಎಂದು ಸಂಸ್ಕøತಿ ಸಚಿವಾಲಯ ತಿಳಿಸಿದೆ.

ಕಳೆದ ಕೆಲವು ವರ್ಷಗಳಿಂದ, ಪ್ರಧಾನಿ ನರೇಂದ್ರ ಮೋದಿಯವರು ಐತಿಹಾಸಿಕ ಉಡುಗೊರೆಗಳಲ್ಲಿ ಸೊಗಸಾದ ವರ್ಣಚಿತ್ರಗಳು, ಶಿಲ್ಪಗಳು, ಕರಕುಶಲ ವಸ್ತುಗಳು ಮತ್ತು ಜಾನಪದ ಕಲಾಕೃತಿಗಳನ್ನು ದೇಶ ವಿದೇಶಗಳ ಹಲವಾರು ಮಹನೀಯರುಗಳಿಂದ ಅತ್ಯಮೋಘವಾದ ಸ್ಮರಣಿಕೆಗಳನ್ನು ಪಡೆದಿದ್ದಾರೆ.

ಅಂತಹ ಸ್ಮರಣಿಕೆಗಳನ್ನು ಮೋದಿ ಅವರ ಜನ್ಮದಿನವಾದ ಸೆ.17 ರಿಂದ ಹರಾಜು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಇದೀಗ ಹರಾಜು ಪ್ರಕ್ರಿಯೆನ್ನು ಅ.12ರವರೆಗೆ ವಿಸ್ತರಿಸಲಾಗಿದೆ.

ಪ್ರಧಾನಿಗೆ ನೀಡಲಾದ 1200 ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಹರಾಜು ಮಾಡಲಾಗುತ್ತದೆ. ಈ 1,200 ಉಡುಗೊರೆಗಳಲ್ಲಿ, ಅಯೋಧ್ಯೆಯ ಶ್ರೀರಾಮ ಮಂದಿರ ಮತ್ತು ವಾರಣಾಸಿಯ ಕಾಶಿ-ವಿಶ್ವನಾಥ ದೇವಾಲಯದ ಪ್ರತಿಕೃತಿಗಳು ಮತ್ತು ಮಾದರಿಗಳು ಆಕರ್ಷಣೆಯ ಕೇಂದ್ರವಾಗಿದ್ದು, ಇವುಗಳನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಸಂಸ್ಥೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ.

Articles You Might Like

Share This Article