ನಿತ್ಯ ನೀತಿ : ತನ್ನನ್ನು ಗೆಲ್ಲುವುದು ಇತರರನ್ನು ಗೆಲ್ಲುವುದಕ್ಕಿಂತ ದೊಡ್ಡ ಕೆಲಸ.
ಪಂಚಾಂಗ ಸೋಮವಾರ 10-10-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ರೇವತಿ / ಮಳೆ ನಕ್ಷತ್ರ: ಹಸ್ತ
ಸೂರ್ಯೋದಯ: ಬೆ.06.09
ಸೂರ್ಯಾಸ್ತ: 06.04
ರಾಹುಕಾಲ: 7.30-9.00
ಯಮಗಂಡ ಕಾಲ: 10.30-12.00
ಗುಳಿಕ ಕಾಲ: 1.30-3.00
ರಾಶಿ ಭವಿಷ್ಯ
ಮೇಷ: ನಿಮ್ಮ ಬುದ್ಧಿವಂತಿಕೆಯ ಸಾಮಥ್ರ್ಯದ ಅರಿವು ನಿಮಗಿರುವುದಿಲ್ಲ. ಧೈರ್ಯದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗಲಿದೆ.
ವೃಷಭ: ಕೆಲವು ದಾಖಲೆಗಳ ಹುಡುಕಾಟದಲ್ಲೇ ಹೆಚ್ಚು ಸಮಯ ಕಳೆಯುವಿರಿ.
ಮಿಥುನ: ಸ್ವ ಉದ್ಯೋಗಿ ಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿವೆ.
ಕಟಕ: ಆಹಾರ ವ್ಯತ್ಯಾಸ ದಿಂದ ಪಿತ್ತ ಸಂಬಂಧಿ ಅನಾರೋಗ್ಯ ಕಾಡಬಹುದು.
ಸಿಂಹ: ಉನ್ನತ ಅಧಿಕಾರಿಗಳಿಗೆ ಹೊರ ರಾಜ್ಯಗಳಿಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ.
ಕನ್ಯಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿಯಾದರೂ ಸಾಲ ನೀಡುವುದು ಸರಿಯಲ್ಲ.
ತುಲಾ: ನೀತಿ-ನಿಯಮವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸುವುದು ಸರಿಯಲ್ಲ.
ವೃಶ್ಚಿಕ: ಮದುವೆಯ ಸಲುವಾಗಿ ವಸ್ತ್ರಾಭರಣ ಖರೀದಿ ಮಾಡುವಿರಿ. ಹಿರಿಯರ ಆರೋಗ್ಯದಲ್ಲಿ ಪ್ರಗತಿ ಕಾಣುವಿರಿ.
ಧನುಸ್ಸು: ಕಾನೂನು ವ್ಯವಹಾರಗಳು ಶೀಘ್ರವಾಗಿ ಇತ್ಯರ್ಥವಾಗಲಿವೆ. ದೂರ ಪ್ರಯಾಣ ಮಾಡುವಿರಿ.
ಮಕರ: ಯಾವುದೇ ಪರಿಸ್ಥಿತಿಯಲ್ಲೂ ಅವಸರದ ತೀರ್ಮಾನ ಕೈಗೊಳ್ಳುವುದು ಸೂಕ್ತವಲ್ಲ.
ಕುಂಭ: ಕುಟುಂಬ ನಿರ್ವಹಣೆಯಲ್ಲಿ ಒಡಹುಟ್ಟಿದವರ ಸಹಕಾರ ದೊರೆಯಲಿದೆ.
ಮೀನ: ಬಂಧುಗಳ ಅವಹೇಳನಕಾರಿ ಮಾತುಗಳು ನಿಮ್ಮ ಮನಸ್ಸಿಗೆ ನೋವುಂಟುಮಾಡಲಿದೆ.