ಚಿಕ್ಕನಾಯಕನಹಳ್ಳಿಯಲ್ಲಿ ರಾಹುಲ್ ಪಾದಯಾತ್ರೆಗೆ ಹರಿದು ಬಂದ ಜನಸಾಗರ

Social Share

ತುಮಕೂರು,ಅ.9- ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರವ ಭಾರತ್ ಜೋಡೋ ಪಾದಯಾತ್ರೆ ಜಿಲ್ಲೆಯ ಚಿಕ್ಕನಾಯಕನಹಳ್ಳಿಗೆ ತಲುಪಿದೆ. ಪಾದಯಾತ್ರೆ ನೋಡಲು ಬಂದಿದ್ದ ಅಪಾರ ಜನಸಂಖ್ಯೆಯ ನಡುವೆಯೂ ಮಕ್ಕಳಾದ ಮಾನ್ವಿ ಹಾಗೂ ಅನ್ವಿಕಾ ಎಂಬ ಮಕ್ಕಳನ್ನು ಪ್ರೀತಿಯಿಂದ ಕರೆದು ರಾಹುಲ್‍ಗಾಂ ಅವರು ಫೋಟೋ ತೆಗೆಸಿಕೊಂಡು ಅವರೊಂದಿಗೆ ಹೆಜ್ಜೆ ಹಾಕಿದರು.

ರಾಹುಲ್ ಗಾಂಧಿ ಅವರ ಸರಳ ಸಜ್ಜನಿಕೆಯನ್ನು ಕಂಡ ಮಕ್ಕಳ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದ ವೃತ್ತದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ರಾಹುಲ್ ಪುಷ್ಪನಮನ ಸಲ್ಲಿಸಿ, ನಂತರ ಕನಕಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ರಾಹುಲ್‍ಗಾಂಧಿ ಅವರಿಗೆ ಕಂಬಳಿ ನೀಡಲು ಸಿದ್ಧತೆ ಮಾಡಿಕೊಂಡಿದ್ದರಾದರೂ ಭದ್ರತಾ ದೃಷ್ಟಿಯಿಂದ ಕಂಬಳಿ ನೀಡಲು ನಿರಾಕರಿಸಲಾಯಿತು.

ತೆಂಗು ಬೆಳೆಗಾರ ಅಣೆಕಟ್ಟೆ ವಿಶ್ವನಾಥ್ ಅವರು ರಾಹುಲ್‍ಗಾಂಧಿಗೆ ತೆಂಗಿನ ಸಸಿ ನೀಡಿದರು. ಬಳಿಕ ರಾಹುಲ್ ರೈತನೊಂದಿಗೆ ಸೌಜನ್ಯವಾಗಿ ಮಾತನಾಡಿದ್ದು ಎಲ್ಲರ ಗಮನ ಸೆಳೆಯಿತು. ತರಬೇನಹಳ್ಳಿ ಸಮೀಪದ ಕಾಡೇನಹಳ್ಳಿ ಬಳಿ ವಿಶ್ರಾಂತಿ ಪಡೆದು ಸಂಜೆ 4 ಗಂಟೆಗೆ ಚಿಕ್ಕನಾಯಕನಹಳ್ಳಿಯಿಂದ ಪಾದಯಾತ್ರೆ ಪ್ರಾರಂಭವಾಯಿತು. ನಾಳೆ ಬೆಳಗ್ಗೆ 11 ಗಂಟೆಗೆ ಲಂಬಾಣಿ ಸಮುದಾಯದವರೊಂದಿಗೆ ರಾಹುಲ್ ಸಂಭಾಷಣೆ ನಡೆಸಲಿದ್ದು, ಮಧ್ಯಾಹ್ನ 3 ಗಂಟೆಗೆ ಸಭೆ ಹಮ್ಮಿಕೊಂಡಿದ್ದು, 7 ಗಂಟೆ ವರೆಗೆ ಪಾದಯಾತ್ರೆ ಮುಂದುವರೆಯಲಿದೆ.

ತರಬೇನಹಳ್ಳಿಯಿಂದ ಮಾಲಿಗೆಹಳ್ಳಿವರೆಗೂ ಪಾದಯಾತ್ರೆ ನಡೆಯಲಿದ್ದು, ಪರಕನಾಳು ಗೇಟ್ ಬಳಿ ತಂಡ ವಿಶ್ರಾಂತಿ ಪಡೆದು ಬೆಳಗ್ಗೆ ಹುಳಿಯಾರಿನಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿರುವ ಪಾದಯಾತ್ರೆ ಕಾರ್ಯಕ್ರಮದಲ್ಲಿ ರಾಹುಲ್‍ಗಾಂಧಿ ಪಾಲ್ಗೊಳ್ಳಲಿದ್ದಾರೆ.

ಸಾವಿರಾರು ಕಾರ್ಯಕರ್ತರು ಹೆಜ್ಜೆ ಹಾಕಿ ಪಾದಯಾತ್ರೆಗೆ ಸಾಥ್ ನೀಡುವ ಮೂಲಕ ನಾಯಕರಿಗೆ ಇನ್ನಷ್ಟು ಉತ್ಸಾಹ ತುಂಬಿದರು.

Articles You Might Like

Share This Article