ಝಾನ್ಸಿ ,(ಉತ್ತರ ಪ್ರದೇಶ) ಅ. 9 – ಮಧ್ಯಪ್ರದೇಶದ ಗಡಿಭಾಗದ ಟಿಕಮಗಢ ಜಿಲ್ಲೆಯ ಝಾನ್ಸಿಯ ಸಪ್ರ್ರಾ ಅಣೆಕಟ್ಟಿನ ನೀರಿನಲ್ಲಿ ಮೂವರು ಮಹಿಳೆಯರ ಮೃತದೇಹಗಳನ್ನುನ ಪತ್ತೆಯಾಗಿದೆ.
ಮೃತರನ್ನು 18 ರಿಂದ 20 ವರ್ಷ ವಯಸ್ಸಿನವರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ತಿಳಿಸಿದ್ದಾರೆ. ಹಾವು ಕಚ್ಚಿರಬಹುದು ಎಮದು ಶಂಕಿಸಲಾಗಿದೆ. ಅಣೆಕಟ್ಟಿನಲ್ಲಿ ಮೃತದೇಹ ತೇಲುತ್ತಿರುವ ಬಗ್ಗೆ ಮೌರಾನಿಪುರದ ನೀರಾವರಿ ಇಲಾಖೆ ಉದ್ಯೋಗಿಯೊಬ್ಬರಿಂದ ಶನಿವಾರ ತಡರಾತ್ರಿ ಮಾಹಿತಿ ಲಭಿಸಿದ್ದು ಇಂದು ಬೆಳಿಗ್ಗೆ ಹೊರಕ್ಕೆ ತೆಗೆಯಲಾಗಿದೆ.
ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಅವರು ಹೇಳಿದರು.ಅವರು ಟಿಕಮಗಢ್‍ನಿಂದ ಕೊಚ್ಚಿ ಕೊಂಡು ಇಲ್ಲಿಗೆ ಬಂದಿರಬಹುದು, ಮೃತರ ಮಾಹಿತಿ ಪಡೆಯಲಾಗುತ್ತಿದೆ ,
ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ