ಬೆಂಗಳೂರು,ಅ.8- ಟಿಪ್ಪು ಎಕ್ಸ್‍ಪ್ರೆಸ್ ಹೆಸರು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ. ಟಿಪ್ಪು ಎಕ್ಸ್‍ಪ್ರೆಸ್ ಹೆಸರು ಬದಲಾಯಿಸಿದ್ದು ಸರಿಯಲ್ಲ. ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಣೆ ಮಾಡಿರುವ ಟಿಪ್ಪು ಹೆಸರನ್ನು ಕೈ ಬಿಟ್ಟಿರುವುದು ಕೇಂದ್ರ ಸರ್ಕಾರದ ಸಣ್ಣತನಕ್ಕೆ ಹಿಡಿದ ಕೈಗನ್ನಡಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನ್ನ ಎರಡು ಮಕ್ಕಳನ್ನು ದೇಶಕ್ಕಾಗಿ ಒತ್ತೆಯಿಟ್ಟು ದೇಶಪ್ರೇಮ ಮೆರೆದಿದ್ದ ಟಿಪ್ಪು ಅವರ ಹೆಸರಿನಲ್ಲಿ ಇದುವರೆಗೂ ಓಡಾಡುತ್ತಿದ್ದ ಟಿಪ್ಪು ಎಕ್ಸ್‍ಪ್ರೆಸ್ ರೈಲಿಗೆ ಇದೀಗ ಓಡೆಯರ್ ಎಕ್ಸ್‍ಪ್ರೆಸ್ ಎಂದು ಮರು ನಾಮಕರಣ ಮಾಡಿರುವುದು ಅತ್ಯಂತ ಅಗೌರವ, ಅನಾಗರಿಕ ಸಂಸ್ಕøತಿ ಎಂದು ಅವರು ಆರೋಪಿಸಿದ್ದಾರೆ.
ಇಂತಹ ಪರಿಸ್ಥಿತಿ ಮುಂದುವರಿದರೆ ಇದು ಯಾರಿಗೂ ಗೌರವ ತರವಂಥದಲ್ಲ.ಇದರಿಂದ ನನಗೆ ಬಹಳ ನೋವಾಗಿದೆ ಎಂದು ವಾಟಾಳ್ ನಾಗರಾಜ್ ಅವರು ಆಕ್ರೋಶ ಹೊರಹಾಕಿದ್ದಾರೆ.