ಬೆಂಗಳೂರು, ಅ.8- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೈಗೆ ಗಾಯಾವಾಗಿದ್ದು ಚಿಕಿತ್ಸೆ ಪಡೆದ ಬಳಿಕ ಇಂದು ತುಮಕೂರಿನಲ್ಲಿ ಪ್ರಯಾಣ ಬೆಳೆಸಿ ಮಧ್ಯಾಹ್ನಾ ಪಾದಯಾತ್ರೆಯಲ್ಲಿ ಸೇರಿಕೊಂಡರು. ನಿನ್ನೆ ಜಾರಿ ನಿರ್ದೇಶನಲಾಯದ ಕಚೇರಿಯಲ್ಲಿ ಜಾರಿ ಬಿದ್ದಿದ್ದು, ಬಲಗೈನಲ್ಲಿ ಏರ್‍ಲೈನ್ ಕ್ರಾಕ್ ಆಗಿ ನೋವು ನೀಡುತ್ತಿತ್ತು ಎನ್ನಲಾಗಿದೆ.
ಇಂದು ಬೆಳಗ್ಗೆ ಕೈನ ಎಕ್ಸರೆ ತೆಗೆದು ಪರಿಶೀಲಿಸಿದ ವೈದ್ಯರು ಸಣ್ಣ ಪ್ರಮಾಣದ ಹಾನಿಯಾಗಿದ್ದು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದರು. ಚಿಕಿತ್ಸೆ ಬಳಿಕ ಡಿ.ಕೆ.ಶಿವಕುಮಾರ್ ತುಮಕೂರಿನತ್ತ ಪ್ರಯಾಣಿಸಿದರು. ತುರುವೇಕೆರೆಯ ಅರಳೀಕೆರೆ ಪಾಳ್ಯದಲ್ಲಿ ರಾಹುಲ್‍ಗಾಂಧಿ ನೇತೃತ್ವದಲ್ಲಿ ನಡೆಯುವ ಪತ್ರಿಕಾಗೋಷ್ಟಿಯಲ್ಲಿ ಭಾಗಿಯಾದರು.
ಜಾರಿ ನಿರ್ದೇಶನಾಲಯದ ನೋಟಿಸ್ ಹಿನ್ನೆಲೆಯಲ್ಲಿ ನಿನ್ನೆ ದೆಹಲಿಗೆ ತೆರಳಿದ ಡಿ.ಕೆ.ಶಿವಕುಮಾರ್ ಯಂಗ್ ಇಂಡಿಯಾ ಸಂಸ್ಥೆಗೆ ದೇಣಿಗೆ ನೀಡಿದ ಕುರಿತುಂತೆ ವಿಚಾರಣೆ ಎದುರಿಸಿದರು.
ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಾಸಾದ ಅವರು ಇಂದು ಬೆಳಗ್ಗೆ ಮತ್ತೆ ಪಕ್ಷದ ಕಾರ್ಯಕ್ರಮದತ್ತ ಮುಖ ಮಾಡಿದರು.
ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರ ಅನುಪಸ್ಥಿತಿಯಲ್ಲಿ ನಿನ್ನೆ ರಾಹುಲ್‍ಗಾಂಧಿ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಜೊತೆಯಲ್ಲಿದ್ದರು.