ತ್ರಿವೇಣಿ ಸಂಗಮದಲ್ಲಿ ವಿಜೃಂಭಣೆಯ ಲಕ್ಷ ದೀಪೋತ್ಸವ

Social Share

ತಿ.ನರಸೀಪುರ,ನ.7- ಶ್ರೀ ಗುಂಜಾನರಸಿಂಹ ಸ್ವಾಮಿ ಸೇವಾಸಮಿತಿ ಹಾಗೂಯುವ ಬ್ರಿಗೇಡ್ ವತಿಯಿಂದ ಪಟ್ಟಣದ ಕಾವೇರಿ-ಕಪಿಲಾ-ಸ್ಪಟಿಕ ನದಿಗಳ ತ್ರಿವೇಣಿ ಸಂಗಮದಲ್ಲಿ ಕಾವೇರಿ ಕಪಿಲಾರತಿ, ತೆಪ್ರೋತ್ಸವ ಹಾಗೂ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.

ದೇಗುಲದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನಿರೀಕ್ಷೆಗೂ ಮೀರಿದ ಜನಸ್ತೋಮ ದೇವಸ್ಥಾನಕ್ಕೆ ಹರಿದು ಬಂದಿತ್ತು. ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನಕ್ಕೆ ಬಂದ ಭಕ್ತಾಗಳು ದೇವಾಲಯದ ಮುಂಭಾಗದ ಆವರಣದಲ್ಲಿ ಬಣ್ಣದ ರಂಗೋಲಿಯನ್ನು ಬಿಡಿಸಿ ಹಣತೆಗಳನ್ನು ಹಚ್ಚಿ ಸಂಭ್ರಮಿಸಿದರು.

ಅಮೆರಿಕ ಸಮರಾಭ್ಯಾಸಕ್ಕೆ ಉತ್ತರ ಕೊರಿಯಾ ಆಕ್ರೋಶ

ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತ ಸ್ತೋಮ ಶ್ರೀ ಗುಂಜಾನರಸಿಂಹ ಸ್ವಾಮಿ ದರ್ಶನಪಡೆದುಕೊಂಡು ಭಕ್ತಿ ಭಾವ ಮೆರೆದರು.ಇದಕ್ಕೂ ಮೊದಲು ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನುನಡೆಸಲಾಯಿತು.
ಶ್ರೀ ಗುಂಜಾ ನರಸಿಂಹ ಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಕಪಿಲಾನದಿಯಲ್ಲಿ ವಿದ್ಯುತ್ ದೀಪ ಹಾಗೂ ವಿವಿಧ ಬಗೆಯ ದೀಪಗಳಿಂದ ಸಿಂಗರಿಸಲಾಗಿದ್ದ ತೆಪ್ಪದ ಮೇಲೆ ಕೂರಿಸಿ ನದಿಯ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು. ಈ ವೇಳೆ ನೆರೆದಿದ್ದ ಸಾವಿರಾರು ಭಕ್ತಾಗಳು ನರಸಿಂಹ ಸ್ವಾಮಿಗೆ ಜಯಘೋಷ ಕೂಗಿದರು.

ರಾಜ್ಯದಲ್ಲಿ ಉಪಚುನಾವಣೆ ನಡೆಸದಿರಲು ಆಯೋಗ ನಿರ್ಧಾರ ..?

ಇದೇ ಮೊದಲ ಬಾರಿಗೆ ಕಪಿಲಾ ನದಿಯಲ್ಲಿ ಕಾವೇರಿ ಕಪಿಲಾರತಿಯನ್ನು ಹಮ್ಮಿಕೊಳ್ಳಲಾಗಿತ್ತು. ವೈಭವಯುತವಾಗಿ ನಡೆದ ಗಂಗಾರತಿ ಮಾದರಿ ನಡೆದ ಕಪಿಲಾರತಿಯನ್ನು ಸಹಸ್ರಾರು ಮಂದಿ ಭಕ್ತಾಗಳು ಕಣ್ತುಂಬಿಕೊಂಡರು. ಈ ವೇಳೆ ಸಿಡಿದ ಬಾಣ ಬಿರುಸು ಗಮನ ಸೆಳೆಯಿತು.ಯುವ ಬ್ರಿಗೇಡ್ ನ ಜಿಲ್ಲಾ ಸಂಚಾಲಕ ರಾಮನುಜಂ ರಾಜಗೋಪಾಲ್ ಸೇರಿದಂತೆ ಅನೇಕ ಮುಖಂಡರು ಈ ವೇಳೆ ಹಾಜರಿದ್ದರು.

Articles You Might Like

Share This Article