ಮತ್ತೊಂದು ವಿವಾದದಲ್ಲಿ ‘ಕಿರಿಕ್’ ಹಾಸನ್

Social Share

ಚೆನ್ನೈ,ಅ.8-ಖ್ಯಾತ ಚಿತ್ರ ನಟ ಕಮಲ್ ಹಾಸನ್ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹಳೆಯ ಸಂದರ್ಶನವೊಂದರಲ್ಲಿ ಹಣಕ್ಕಾಗಿ ಬೈಬಲ್ ಮಾರಾಟ ಮಾಡಿದ್ದೇನೆ ಮತ್ತು ನನ್ನ ಸಹೋದರನನ್ನು ಕ್ರಿಶ್ಚಿಯನ್ ರೀತಿಯಲ್ಲಿ ಸಮಾಧಿ ಮಾಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಎಚ್ ರಾಜಾ ನೀಡಿರುವ ಹೇಳಿಕೆ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.

ತಮಿಳು ಸಂತ ತಿರುವಳ್ಳುವರ್ ಮತ್ತು ರಾಜ ರಾಜ ಚೋಳರನ್ನು ತಮಿಳು ಸಾಂಸ್ಕøತಿಕ ಐಕಾನ್‍ಗಳಾಗಿದ್ದಾರೆ ಎಂಬ ಗುರುತನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ತಮಿಳು ನಿರ್ದೇಶಕ ವೆಟ್ರಿಮಾರನ್ ಹೇಳಿಕೆಯನ್ನು ಕಮಲ್ ಹಾಸನ್ ಬೆಂಬಲಿಸಿದ ನಂತರ ಈ ವಿವಾದ ಭುಗಿಲೆದ್ದಿದೆ.

ವೆಟ್ರಿಮಾರನ್ ಅವರು ಮಣಿರತ್ನಂ ಅವರ ಪೊಯಿನ್ ಸೆಲ್ವನ್‍ನಲ್ಲಿ ಚಿತ್ರಿಸಿರುವಂತೆ ಚೋಳ ಹಿಂದೂ ರಾಜನಾಗಿರಲಿಲ್ಲ. ಅದು ಕೇವಲ ಲೇಖಕ ಕಲ್ಕಿ ಕೃಷ್ಣಮೂರ್ತಿ ಅವರ ಐತಿಹಾಸಿಕ ಕಾಲ್ಪನಿಕ ಕಥೆಯಾಗಿತು ಎಂದಿದ್ದರು.

ವೆಟ್ರಿಮಾರನ್ ಅವರ ಈ ಹೇಳಿಕೆಗೆ ಕಮಲ್ ಹಾಸನ್ ಬೆಂಬಲ ವ್ಯಕ್ತಪಡಿಸಿದ್ದರು. ಇದು ಬಿಜೆಪಿಯನ್ನು ಕೆರಳಿಸಿದ್ದು, ಕಮಲ್ ಹಾಸನ್ ಅವರಿಗೆ ಯಾವುದರ ಬಗ್ಗೆಯೂ ಆಳವಾಗಿ ಓದದ ಅಭ್ಯಾಸವಿದೆ. ಅವರು ಹಳೆ ಸಂದರ್ಶವೊಂದರಲ್ಲಿ ಕರಣ್ ಥಾಪರ್ ಬಳಿ ಹಣಕ್ಕಾಗಿ ಬೈಬಲ್ ಮಾರಿದ್ದೆ ಹಾಗೂ ತನ್ನ ಸಹೋದರ ಚಂದ್ರಹಾಸನ್ ಅವರನ್ನು ಕ್ರಿಶ್ಚಿಯನ್ ರೀತಿಯಲ್ಲಿ ಸಮಾಧಿ ಮಾಡಲಾಗಿದೆ ಎಂದು ಹೇಳಿದ್ದನ್ನು ಅಲ್ಲಗಳೆಯುವಂತಿಲ್ಲ ಎಂದು ರಾಜಾ ಅವರು ತಿರುಗೇಟು ನೀಡಿದ್ದಾರೆ.

ಬಿಜೆಪಿ ನಾಯಕರು ವೆಟ್ರಿಮಾರನ್ ಮತ್ತು ಕಮಲ್ ಹಾಸನ್ ಅವರ ಕಾಮೆಂಟ್‍ಗಳನ್ನು ಟೀಕಿಸುವುದರೊಂದಿಗೆ ವಿವಾದವು ಉಲ್ಬಣಗೊಂಡಿತು. ರಾಜರಾಜ ಹಿಂದೂ ಅಲ್ಲ ಶೈವ ಎಂದು ಹೇಳುವುದು ಯಾರೋ ಕ್ಯಾಥೋಲಿಕ್ ಆದರೆ ಕ್ರಿಶ್ಚಿಯನ್ ಅಲ್ಲ ಎಂದು ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಶುಕ್ರವಾರ ಹೇಳಿದ್ದಾರೆ.

ಇದು ಸಂಪೂರ್ಣವಾಗಿ ಹಾಸ್ಯಾಸ್ಪದವಾಗಿದೆ. ಶಿವ ಆದಿ ಹಿಂದೂ ದೇವತೆ, ಶ್ರೀನಗರದಿಂದ ರಾಮೇಶ್ವರದವರೆಗೆ ಸಹಸ್ರಾರು ವರ್ಷಗಳಿಂದ ಲಕ್ಷಾಂತರ ಜನರ ತೀವ್ರ ಭಕ್ತಿಯ ಕೇಂದ್ರಬಿಂದುವಾಗಿದೆ. ಚಕ್ರವರ್ತಿಯು ವಾಸ್ತುಶಿಲ್ಪದ ಅದ್ಭುತವಾದ ಶಿವ ದೇವಾಲಯಗಳಲ್ಲಿ ಒಂದನ್ನು ನಿರ್ಮಿಸಿದನು, ವಿಶೇಷವಾಗಿ ತಂಜಾವೂರಿನಲ್ಲಿರುವ ಮಹಾನ್ ಬೃಹದೀಶ್ವರ ದೇವಾಲಯ. ಅಲ್ಲಿ ನಾನು ಹಲವು ಬಾರಿ ಪೂಜೆ ಸಲ್ಲಿಸಿದ್ದೇನೆ ಎಂದು ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Articles You Might Like

Share This Article