ರಾಹುಲ್ ಪಾದಯಾತ್ರೆಯಿಂದ ಸಿದ್ದು ಆರೋಗ್ಯ ಸುಧಾರಿಸಿದೆ : ಜೋಶಿ ಲೇವಡಿ

Social Share

ಹುಬ್ಬಳ್ಳಿ,ಅ.9- ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ ಗಾಂಧಿ ಹಾಗು ಸಿದ್ದರಾಮಯ್ಯಗೆ ಆರೋಗ್ಯ ಸುಧಾರಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯಾನವರಿಗೆ ಸ್ವಲ್ಪ ಆರೋಗ್ಯ ಸುಧಾರಿಸಬಹುದು. ಯಾಕಂದ್ರೆ ಅವರಿಗೆ ವಾಕಿಂಗ್ ಆಗ್ತಿದೆ ಎಂದ ಅವರು ನನ್ನ ವಿರುದ್ದ ಅಪಪ್ರಚಾರಕ್ಕೆ ಕೋಟಿ ಕೋಟಿ ಖರ್ಚು ಮಾಡ್ತಾರೆ ಎಂದು ರಾಹುಲ್ ಗಾಂಧಿ ಹೇಳಿಕೆಗೆ ಜೋಶಿ ಪ್ರತಿಕ್ರೀಯೆ ಸಹ ನೀಡಿದ್ದರು.

ರಾಹುಲ್ ಗಾಂಧಿ ವಿರುದ್ದ ನಾವ್ಯಾಕೆ ಖರ್ಚು ಮಾಡಬೇಕು ಎಂದು ಮರು ಪ್ರಶ್ನೆ ಮಾಡಿದ ಅವರು, ಇದು ಜನರಿಗೂ ಗೊತ್ತಾಗಿದೆ,ಅವರ ಪಕ್ಷದವರಿಗೂ ಗೊತ್ತಿದೆ ಎಂದ ಸಚಿವ. ಪ್ರಲ್ಹಾದ್ ಜೋಶಿ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕುರೋಕೆ ಅರ್ಹತೆ ಇಲ್ಲ ಎಂದ ಒಂದು ಕಾಲದಲ್ಲಿ 28 ರಾಜ್ಯಗಳಲ್ಲಿ 26 ,27 ರಾಜ್ಯಗಳಲ್ಲಿ ಅವರದೇ ಅಧಿಕಾರ ಇತ್ತು ಇವತ್ತು ಕೇವಲ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅದರಲ್ಲಿ ರಾಜಸ್ತಾನ ಇದೀಗ ಅಲುಗಾಡ್ತಿದೆ ಎಂದು ಖಾರವಾಗಿ ಹೇಳಿದರು.

ಸ್ಪರ್ಧೆ ಮಾಡೋ ಎಲ್ಲ ಚುನಾವಣೆಯಲ್ಲಿ ಸೋಲ್ತೀದಾರೆ ಅವರ ಉತ್ತರ ಪ್ರದೇಶದಲ್ಲಿ ಒಂದು ಸೀಟ್ ಗೆದ್ದಿಲ್ಲ 398 ಸೀಟ್ ನಲ್ಲಿ 388 ಸೀಟ್ ನಲ್ಲಿ ಡಿಪಾಸೀಟ್ ಕಳೆದುಕೊಂಡಿದ್ದಾರೆ. ಅವರನ್ನ ನಿಷ್ಪಪ್ರಯೋಜಕ, ಅಪ್ರಯೋಜಕ ಬುದ್ದಿ ಇಲ್ಲ ಅಂತಾ ನಾವ ಹೇಳೋದಿಲ್ಲ ಎಂದು ಜೋಶಿ ಟೀಕಿಸಿದರು

ವಿಶ್ವಕ್ಕೆ ಅತ್ಯುತ್ತಮ ಗ್ರಂಥವನ್ನ ಕೊಟ್ಟಿರುವುದು ಮಹಶ್ರೀ ವಾಲ್ಮೀಕಿ:
ವಿಶ್ವಕ್ಕೆ ಅತ್ಯುತ್ತಮ ಗ್ರಂಥವನ್ನ ಕೊಟ್ಟಿರುವುದು ಮಹಶ್ರೀ ವಾಲ್ಮೀಕಿ ಅವರುನೈಜ ಘಟನೆಯನ್ನ ರಾಮಾಯಣದಲ್ಲಿ ಚಿತ್ರಿಸಿದ್ದು ವಾಲ್ಮೀಕಿ ಅವರು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಅಭಿಪ್ರಾಯಪಟ್ಟರು. ಮೀಸಲಾತಿ ಹೆಚ್ಚಳ ಮಾಡಿರುವುದು ಐತಿಹಾಸಿಕವಾಗಿದ್ಸು, ಕಾಂಗ್ರೆಸ್ ದಲಿತರನ್ನ ವೋಟ್ ಬ್ಯಾಂಕ್‍ಗಳೆಂದು ತಿಳಿದುಕೊಂಡಿತ್ತು.

ಕಾಂಗ್ರೆಸ್ ಹಿಂದುಳಿದದವರ ಕಲ್ಯಾಣ ಮಾಡಲಿಲ್ಲ ಇದೇ ಕಾರಣಕ್ಕೆ ದಲಿತರ ಸ್ಥಿತಿ ಹೀನಾಯವಾಗಿದ್ದು ಇದೇ ಸಂಧರ್ಭದಲ್ಲಿ ಮೀಸಲಾತಿ ಹೆಚ್ಚಿಸಿ ಮಹತ್ತರ ಕೊಡುಗೆಯನ್ನ ಕೊಡಲಾಗಿದೆ. ಇದಕ್ಕೆ ಕಾರಣವಾದ ಸಿಎಮ್, ಸಚಿವರು, ಸ್ವಾಮೀಜಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೆವೆ ಎಂದರು.

ಬಿಜೆಪಿ ದಿನ ದಲಿತರ ಬಡವರ ಪರ ಪಕ್ಷ ಎಂದು ಸಾಬೀತು ಮಾಡಿದ್ದು ಪಂಚಮಸಾಲಿ ಸೇರಿದಂತೆ ಅನೇಕ ಸಮುದಾಯಗಳು ಮೀಸಲಾತಿ ಹೋರಾಟ ಮಾಡುತ್ತಿವೆ. ಈ ಬಗ್ಗೆ ಸಿಎಮ್ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಮುಖ್ಯಮಂತ್ರಿಗಳು ಮೀಸಲಾತಿ ಕೊಡುತ್ತೆವೆಂದು ಭರವಸೆ ನೀಡಿದ್ದಾರೆ, ಅವರು ಮೀಸಲಾತಿ ನೀಡುತ್ತಾರೆಂದು ನಂಬಿಕೆ ಇದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

Articles You Might Like

Share This Article