ನವದೆಹಲಿ,ಅ.9-ಹೊಸದಾಗಿ ಪ್ರಾರಂಭವಾದ ವಂದೇ ಭಾರತ್ ಎಕ್ಸ್‍ಪ್ರೆಸ್‍ಗೆ ನಿರಂತರ ವಿಘ್ನಗಳು ಎದುರಾಗುತ್ತಲೇ ಇದೆ. ವಂದೇ ಭಾರತ್ ಹೈಸ್ಪೀಡ್ ರೈಲು ಎಮ್ಮೆಗಳ ಹಿಂಡಿಗೆ ಗುದ್ದಿ ಸುದ್ದಿಯಾಗಿತ್ತು. ಈಗ ಬೇರಿಂಗ್ ಜ್ಯಾಮ್ ಆಗಿ ಪ್ರಯಾಣಿಕರನ್ನು ಬೇರೆ ರೈಲಿಗೆ ಕಳುಹಿಸಿದ ಘಟನೆ ನಡೆದಿದೆ.ನಿನ್ನೆ ಬೇರಿಂಗ್ ದೋಷ ಉಂಟಾಗಿ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಬೇರೆ ರೈಲಿಗೆ ಕಳುಹಿಸಿದ ಪರಿಸ್ಥಿತಿ ನಿರ್ಮಾಣವಾಯಿತು.
ಗಾಂಧಿನಗರ ಮುಂಬೈ ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ರೈಲು ಎಮ್ಮೆಗಳ ಹಿಂಡಿಗೆ ಗುದ್ದಿದ ಪರಿಣಾಮ ಮೂರು ಎಮ್ಮೆಗಳು ಮೃತಪಟ್ಟಿದ್ದಲ್ಲದೆ ರೈಲು ಮುಂಭಾಗ ಕೂಡ ಜಖಂ ಆಗಿತ್ತು. ಇದು ಮಾಸುವ ಮುನ್ನವೇ ನವದೆಹಲಿ-ವಾರಣಾಸಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ವೇಳೆ ಬೇರಿಂಗ್ ಜ್ಯಾಮ್ ಆಗಿ ಸಮಸ್ಯೆ ಉಂಟಾಗಿದೆ.
ಬಳಿಕ ದುರಸ್ತಿ ಮಾಡಿದರೂ ಫ್ಲಾಟ್‍ಟೈರ್ ಕಾರಣ ಪ್ರಯಾಣಿಕರನ್ನು ಉಳಿಸಿ ಶತಾಬ್ದಿ ರೈಲಿಗೆ ಕಳುಹಿಸಿಕೊಡಲಾಗಿದೆ. ಬೇರಿಂಗ್ ಸಮಸ್ಯೆಗೀಡಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂದೇ ಭಾರತ್ ರೈಲು ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದು, ಈಗ ಮತ್ತೆ ಹಾನಿಗೀಡಾಗಿರುವುದಕ್ಕೆ ಪರ-ವಿರೋಧಗಳ ಚರ್ಚೆ ಕೇಳಿಬಂದಿದೆ.