ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಸಿಎಂ ಸಂಕಲ್ಪ

Social Share

ಬೆಂಗಳೂರು,ಅ.9- ಮಹರ್ಷಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಣವು ವಿಶ್ವದ 10 ಶ್ರೇಷ್ಠ ಗ್ರಂಥಗಳಲ್ಲೇ ಅತಿ ಶ್ರೇಷ್ಠವಾದುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶಾಸಕರ ಭವನದ ಆವರಣದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಮಹರ್ಷಿ ವಾಲ್ಮೀಕಿ ಜ್ಯೋತಿಯನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಮಾಯಣದಲ್ಲಿ ಜೀವನದ ಸಾರ, ಬದುಕಿನ ಮಾರ್ಗವನ್ನು ವಾಲ್ಮೀಕಿಯವರು ಕೊಟ್ಟಿದ್ದಾರೆ. ಆ ಗ್ರಂಥದಲ್ಲಿರುವ ಪ್ರತಿಯೊಂದು ಪ್ರಸಂಗವೂ ಅರ್ಥಪೂರ್ಣ. ಅನುಕರಣೀ ಯವಾಗಿದೆ. ವಾಲ್ಮೀಕಿಯವರ ತತ್ವಾದರ್ಶವನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ವಾಲ್ಮೀಕಿ ಸಮುದಾಯ ಸೇರಿದಂತೆ ತುಳಿತಕ್ಕೊಳಗಾದ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಆತ್ಮ ಸನ್ಮಾನ, ಆತ್ಮಗೌರವ, ಸಮಾನ ಅವಕಾಶ, ಸ್ವಾಭಿಮಾನದ ಬದುಕನ್ನು ನಡೆಸಲು ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಹೇಳಿದರು.

ವಾಲ್ಮೀಕಿಯವರು ಪರಿವರ್ತನೆಯ ಹರಿಕಾರ, ಶ್ರೇಷ್ಠ ಮಾನವತಾವಾದಿ, ಶ್ರೇಷ್ಠ ರಾಮಾಯಣ ರಚನಾಕಾರ, ಮನುಕುಲಕ್ಕೆ ಸದಾ ಕಾಲ ದಾರಿ ದೀಪವಾದವರು ಎಂದು ಬಣ್ಣಿಸಿದರು. ವಾಲ್ಮೀಕಿ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕೆಂದು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಗುಲ್ಬರ್ಗದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಅಂದಿನಿಂದಲೂ ರಾಜ್ಯದಲ್ಲಿ ಸರ್ಕಾರದಿಂದ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.

ಮಹರ್ಷಿ ವಾಲ್ಮೀಕಿಯವರ ತತ್ವ, ಆದರ್ಶಗಳು, ಸಮಾಜ ಸರ್ಕಾರ ಮಾತ್ರವಲ್ಲ ಪ್ರತಿಯೊಬ್ಬರು ಕೂಡ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಾಡಿನ ಸಮಸ್ತ ಜನತೆಗೆ ವಾಲ್ಮೀಕಿ ಜಯಂತಿ ಶುಭಾಷಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಬೋವಿಪೀಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

Articles You Might Like

Share This Article