ಅಂಬಾರಿ ಹೊರುವ ಅರ್ಜುನನಿಗೆ ಮರಳಿನ ಮೂಟೆ ಹೊರೆಸಿ ತಾಲೀಮು
ಮೈಸೂರು, ಸೆ.1-ಜಂಬೂ ಸವಾರಿಯಲ್ಲಿ 750 ಕೆಜಿ ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅರ್ಜುನನಿಗೆ ಇಂದು ಮರಳಿನ ಮೂಟೆ ಹೊರೆಸಿ ತಾಲೀಮು ನಡೆಸಲಾಯಿತು. ಬೆಳಿಗ್ಗೆ ಅರ್ಜುನನ ನೇತೃತ್ವದಲ್ಲಿ 15 ಆನೆಗಳಿಗೆ ತಾಲೀಮು ಹಮ್ಮಿಕೊಳ್ಳಲಾಯಿತು.ಅರಮನೆ ಆವರಣದಿಂದ ಹೊರಟ ಗಜಪಡೆ ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ಬನ್ನಿ ಮಂಟಪ ತಲುಪಿತು. ಅಲ್ಲಿ ಕೆಲ ನಿಮಿಷ ವಿಶ್ರಾಂತಿ ನೀಡಿ ವಾಪಸ್ ಅರಮನೆಗೆ ಕರೆತಲಾಯಿತು.
ಈ ಸಂದರ್ಭದಲ್ಲಿ ಅರ್ಜುನನಿಗೆ ಅಂಬಾರಿ ಹೊರುವ ತಾಲೀಮು ಕೊಡಲು ಇಂದು 350 ಕೆಜಿ ತೂಕದ ಮರಳಿನ ಮೂಟೆ ಹೊರಿಸಿ ನಡೆಸಲಾಯಿತು.
ಒಂದೆರಡು ದಿನ ಬಿಟ್ಟು ಮರಳಿನ ತೂಕದಲ್ಲಿ ಹೆಚ್ಚಳ ಮಾಡಿ ತಾಲೀಮು ಕೊಡಲಾಗುತ್ತದೆ. ಯಾವುದೇ ಅಳುಕು ಇಲ್ಲದೆ ಗಜಪಡೆಯನ್ನು ಮಾವುತರು ಕರೆದುಕೊಂಡು ಹೋಗಿ ವಾಪಸ್ ಕರೆತಂದರು.