ಅಕಾಲಿಕ ಮರಣವನ್ನಪ್ಪಿದ ಮಗನ 11 ದಿನದ ಕಾರ್ಯ ನೆರವೇರಿಸಿದ ಸಿದ್ದರಾಮಯ್ಯ

Spread the love

rakesh

ಮೈಸೂರು,ಆ.11- ಸಿದ್ದರಾಮಯ್ಯನವರ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯನವರ 11ನೇ ದಿನದ ಕಾರ್ಯವನ್ನು ಇಂದು ಟಿ.ಕಾಟೂರಿನ ಫಾರಂಹೌಸ್‍ನಲ್ಲಿ ಕುಟುಂಬಸ್ಥರು ನೆರವೇರಿಸಿದರು.   ಇಂದು ಬೆಳಗ್ಗೆ ದಿವಂಗತ ರಾಕೇಶ್‍ರವರ 11 ದಿನದ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಸ್ಥರು ಮತ್ತು ರಾಕೇಶ್ ಪತ್ನಿ ಸ್ಮಿತಾ ಹಾಗೂ ಇಬ್ಬರು ಮಕ್ಕಳು ನೆರವೇರಿಸಿದರು.   ಈ ವೇಳೆ ಕುಟುಂಬಸ್ಥರು ರಾಕೇಶ್‍ನನ್ನು ನೆನೆದು ಕಂಬನಿ ಮಿಡಿದರು.  ಕಾರ್ಯಕ್ಕೆ ಆಪ್ತ ವಲಯದವರಿಗೆ ಮಾತ್ರ ಆಹ್ವಾನಿಸಲಾಗಿತ್ತು. ಮಧ್ಯಾಹ್ನ  ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.   ಕಾರ್ಯದ ಸಲುವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು , ಯಾರಿಗೂ ಒಳಗೆ ಪ್ರವೇಶ ನೀಡಿರಲಿಲ. ಆಯ್ದ ಸಾರ್ವಜನಿಕರನ್ನು ತಪಾಸಣೆ ಮಾಡಿಸಿ ಒಳಬಿಡಲಾಗುತಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin