ಅಕ್ಕಪಕ್ಕದ ಪಾನೀಪುರಿ ಅಂಗಡಿಗಳಲ್ಲಿ ಜಗಳ : ಕೊಲೆಯಲ್ಲಿ ಅಂತ್ಯ
ಮಧುಗಿರಿ, ಫೆ.25-ತಾಲ್ಲೂಕಿನ ಹೊಸಹಳ್ಳಿಯ ಗಿರಿರಾಜು (32) ಕೊಲೆಯಾದ ಪಾನೀಪುರಿ ವ್ಯಾಪಾರಿ.ತಿಪ್ಪಗೊಂಡನಹಳ್ಳಿಯಲ್ಲಿ ಗಿರಿರಾಜು ಪಾನೀಪುರಿ ವ್ಯಾಪಾರ ನಡೆಸುತ್ತಿದ್ದರೆ, ಆಸೀಫ್ ರೆಹೆಮಾನ್ ಕೋಳಿ ಅಂಗಡಿ ಇಟ್ಟುಕೊಂಡಿದ್ದರು.ವ್ಯಾಪಾರದ ವೇಳೆ ಅಕ್ಕಪಕ್ಕದ ಅಂಗಡಿಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ. ರಾತ್ರಿ ವ್ಯಾಪಾರ ಮುಗಿಸಿ ಗಿರಿರಾಜು ಮನೆಗೆ ಬಂದಿದ್ದಾರೆ. ಇವರ ಮನೆ ಬಳಿ ಬಂದ ರೆಹೆಮಾನ್, ಇವರ ಪತ್ನಿ ಶಕೀಲಾಬಾನು, ಆಸೀಫ್ಸಾಬ್, ಈತನ ಪತ್ನಿ ಶಮೀನಾಬಾನು ಜಗಳವಾಡಿದ್ದಾರೆ. ಜಗಳದ ವೇಳೆ ಗಿರಿರಾಜು ಅವರ ಎದೆಗೆ ಬಲವಾದ ಪೆಟ್ಟುಬಿದ್ದು ಕುಸಿದು ಬಿದ್ದಿದ್ದಾರೆ. ತಕ್ಷಣ ಗಿರಿರಾಜ್ ಅವರನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.ಘಟನೆ ಸಂಬಂಧ ಆಸೀಫ್ಸಾಬ್, ಈತನ ಪತ್ನಿ ಶಮೀನಾಬಾನು, ರೆಹೆಮಾನ್ ಈತನ ಪತ್ನಿ ಶಕೀಲಾಬಾನು ಎಂಬುವರನ್ನು ಮಿಡಿಗೇಶಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS