ಅಕ್ರಮ ಮತದಾನ ಕಾಂಗ್ರೆಸ್ ದುರಾಡಳಿತಕ್ಕೆ ಒಂದು ನಿದರ್ಶನ : ಎಚ್.ಡಿ.ರೇವಣ್ಣ

Revanna--01

ಬೆಂಗಳೂರು,ಮಾ.23-ರಾಜ್ಯಸಭೆ ಚುನಾವಣೆಗೆ ನಡೆದ ಮತದಾನದ ವೇಳೆ ನಡೆದ ಅಕ್ರಮ ಕಾಂಗ್ರೆಸ್ ದುರಾಡಳಿತಕ್ಕೆ ನಿದರ್ಶನ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣಾ ಸಂದರ್ಭದಲ್ಲಿ ಮತದಾನ ಮಾಡಿದ ಚಿಂಚನಸೂರ್ ಹಾಗೂ ಕಾಗೋಡು ತಿಮ್ಮಪ್ಪ ಅವರು ತಮ್ಮ ಮತ ಪತ್ರವನ್ನು ಏಜೆಂಟರಿಗೆ ತೋರಿಸಿ ಅವರು ಸರಿಯಿಲ್ಲ ಎಂದಾಗ ಮತ್ತೊಂದು ಪತ್ರ ಪಡೆದು ಮತ ಚಲಾಯಿಸಿದ್ದಾರೆ. ಇದರ ವಿರುದ್ಧ ತಾವು ಹಾಗೂ ಜೆಡಿಎಸ್‍ನ ಅಭ್ಯರ್ಥಿ ಫಾರೂಕ್ ಅವರು ದೂರು ನೀಡಿದ್ದೇವೆ. ಕಾಂಗ್ರೆಸ್‍ನ ದುರಾಡಳಿತ ರಾಜ್ಯಸಭಾ ಚುನಾವಣೆಯಲ್ಲಿ ಈ ಹಂತದಲ್ಲಿದ್ದರೆ ಮುಂದೆ ವಿಧಾನಸಭಾ ಚುನಾವಣೆಯಲ್ಲಿ ಹೇಗಿರುತ್ತದೆ ಎಂದು ಪ್ರಶ್ನಿಸಿದರು.

Sri Raghav

Admin