ಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯ

Spread the love

alchoal

ಹನೂರು, ಆ.27- ಪಿ.ಜಿ.ಪಾಳ್ಯ, ಹುತ್ತೂರು, ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಲಿಗರ ಪೋ  ಡುಗಳಲ್ಲಿ ನಡೆಯುತ್ತಿರುವ ಅಕ್ರಮವಾಗಿ ಮದ್ಯ ಮಾರಾಟದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ದೊಡ್ಡಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಜೀರಿಗೆಗದ್ದೆ ಹಾಗೂ ಗುಳ್ಯದಬಯಲು(ಹೊಸಹೊಲ) ಪೋಡುಗಳಲ್ಲಿ ಏರ್ಪಡಿಸಿದ್ದ ಕ್ಷೇತ್ರ ಮಟ್ಟದ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಅಗತ್ಯ ಮೂಲಭೂತ ಅವಶ್ಯಕತೆಗಳಾದ ರಸ್ತೆ, ವಸತಿ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೌಕರ್ಯಗಳನ್ನು ತಕ್ಷಣ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಸೋಲಿಗರ ಪೋಡುಗಳಲ್ಲಿ ಕುಡಿಯುವ ನೀರಿಗೆ ಬರವಿದೆ. ಆದರೆ ಸಾರಾಯಿ ಮಾತ್ರ ಸುಲಭವಾಗಿ ದೊರೆಯುತ್ತಿದೆ. ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶವಿಲ್ಲದಿದ್ದರೂ ಸಹ ಚಿಲ್ಲರೆ ಅಂಗಡಿ ಮತ್ತು ಹೋಟೆಲ್‍ಗಳನ್ನು ನಡೆಸುವ ನೆಪದಲ್ಲಿ ಸೋಲಿಗರ ತಟ್ಟೆಗಳಲ್ಲಿ ಸಾರಾಯಿ ಎಂಬ ವಿಷ ಹಾಕಿ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವಕ್ತಪಡಿಸಿದರು.ಸಾರಾಯಿಯನ್ನು ಹೊಟ್ಟೆಗೆ ತುಂಬಿಸಿಕೊಂಡ ಸೋಲಿಗರು ಅನೇಕ ರೋಗರುಜಿನಗಳಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾಧವ್ಯಕ್ತಪಡಿಸಿದರು. ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದ ಅವರು, ಇಲ್ಲದಿದ್ದಲ್ಲಿ ಹಂತ-ಹಂತವಾಗಿ ಹೋರಾಟವನ್ನು ರೂಪಿಸಲಾಗುವುದೆಂದು ಎಚ್ಚರಿಸಿದರು.

ಪಿ.ಜಿ.ಪಾಳ್ಯ ಮತ್ತು ಹುತ್ತೂರು ಕ್ಷೇತ್ರಮಟ್ಟದಲ್ಲಿ ಸೋಲಿಗರ ಸಂಘಟನೆ ಮತ್ತು ಅಭಿವೃದ್ಧಿಗಾಗಿ ಮಹಿಳೆಯರೂ ಸೇರಿದಂತೆ ಮುಖಂಡರ ತಂಡವನ್ನು ಪುನರ್ ರಚಿಸಲಾಯಿತು. ಮುಖಂಡರು ಪಕ್ಷಾತೀತವಾಗಿ ಸ್ವಯಂ ಸೇವಾ ನೆಲೆಯಲ್ಲಿ ನಿಸ್ವಾರ್ಥತೆಯ ಸೇವಾಪರತೆಯಿಂದ ಸಮುದಾಯದ ಕರ್ತವ್ಯನಿರ್ವಹಿಸಬೇಕು. ಪ್ರತಿ ಪೋಡಿನಲ್ಲೂ ಸಹ ಸಭೆಗಳನ್ನು ನಡೆಸಬೇಕು, ಸಂಘ-ಸಂಸ್ಥೆಗಳ ಸೋಗಿನಲ್ಲಿ ಪೋ ಡುಗಳಿಗೆ ಬರುವ ಅಪರಿಚಿತ ವ್ಯಕ್ತಿಗಳು, ಮಧ್ಯವರ್ತಿ ಗಿರಿಜನೇತರ ವ್ಯಕ್ತಿಗಳ ಕಪಿಮುಷ್ಟಿಗೆ ಸೋಲಿಗರು ಸಿಲುಕದಂತೆ ಎಚ್ಚರವಹಿಸಬೇಕೆಂದು ನಿರ್ಧರಿಸಲಾಯಿತು.  ಸೋಲಿಗ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕು.ಮಾದನ್, ಕಾರ್ಯದರ್ಶಿ ಮುತ್ತಯ್ಯ, ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ನಿರ್ದೇಶಕರಾದ ಮುತ್ತೇಗೌಡ, ಮಹದೇವಯ್ಯ, ಸರ್ಕಲ್ ಸೋಲಿಗ ಸಂಘದ ಅಧ್ಯಕ್ಷ ಮಾದಯ್ಯ, ಉಪಾಧ್ಯಕ್ಷೆ ಮುತ್ತಮ್ಮ, ಲ್ಯಾಂಪ್ಸ್ ಮಾಜಿ ಅಧ್ಯಕ್ಷ ಮುತ್ತೇಗೌಡ, ಗ್ರಾ.ಪಂ.ಸದಸ್ಯ ಜುಟ್ಟುಮಾದ, ಮುಂದಾದವರುಪಾಲ್ಗೊಂಡಿದ್ದರು.

 

► Follow us on –  Facebook / Twitter  / Google+

Sri Raghav

Admin