ಅಕ್ರಮ ಮದ್ಯ ಮಾರಾಟ : ವ್ಯಕ್ತಿಗೆ ಒಂದು ವರ್ಷ ಜೈಲು
ಬೇಲೂರು, ಫೆ.17– ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ ಪ್ರದೀಪ್ ಎಂಬಾತನಿಗೆ ಇಲ್ಲಿನ ಜೆಎಂಎಫ್ಸಿ ಹಿರಿಯ ಶ್ರೇಣಿ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.ತಾಲೂಕಿನ ಸುಲಗಳಲೆ ಗ್ರಾಮದ ಪ್ರದೀಪ್ ಶಿಕ್ಷೆಗೆ ಗುರಿಯಾದವನು. ತನ್ನ ಕೋಳಿ ಅಂಗಡಿ ಮುಂಭಾಗ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಸಮಯದಲ್ಲಿ ಚಾಸಾ-ರವರು ದಾಳಿ ಮಾಡಿ ಅಕ್ರಮ ಮಾಲು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಜೆಎಂಎಫ್ಸಿ ಹಿರಿಯ ಶ್ರೇಣಿ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ, ದಂಡ ಕಟ್ಟದಿದ್ದರೆ ನಾಲ್ಕು ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ನಾಗರತ್ನ ವಾದ ಮಂಡಿಸಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments