ಅಕ್ಷಯ್ ಅಮರ್ ರಹೇ.. : ಹುತಾತ್ಮ ಯೋಧನಿಗೆ ಅಂತಿಮ ನಮನ

Akshay-01

ಬೆಂಗಳೂರು, ಡಿ.1- ಜಮ್ಮು-ಕಾಶ್ಮೀರದ ನಗ್ರೋಟ್‍ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಬೆಂಗಳೂರು ನಗರದ ಮೇಜರ್ ಅಕ್ಷಯ್ ಗಿರೀಶ್‍ಕುಮಾರ್ ಅವರ ಪಾರ್ಥಿವ ಶರೀರ ನಗರದ ಯಲಹಂಕ ಸಾದಹಳ್ಳಿ ಬಳಿಯ ಅವರ ನಿವಾಸಕ್ಕೆ ತರುತ್ತಿದ್ದಂತೆ ಬಂಧುಗಳು, ಸ್ನೇಹಿತರು, ಸಾರ್ವಜನಿಕರ ಆಕ್ರಂಧನ ಮುಗಿಲು ಮುಟ್ಟಿತ್ತು.  ಜಡ್ ಗಾರ್ಡನ್‍ನಲ್ಲಿರುವ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂಬಂಧಿಕರು, ಸ್ನೇಹಿತರು, ಸಾರ್ವಜನಿಕರು ಅಂತಿಮ ದರ್ಶನ ಪಡೆದು ಹೆಮ್ಮೆಯ ಯೋಧನಿಗೆ ಅಂತಿಮ ಸೆಲ್ಯೂಟ್ ಸಲ್ಲಿಸಿದರು.

ತಮ್ಮ ಸ್ನೇಹಿತನ ಸಾವಿನ ನೋವಿನ ದುಃಖವನ್ನು ಸಹಿಸಿಕೊಂಡು ಅಂತಿಮ ನಮನ ಸಲ್ಲಿಸಿದ ಸ್ನೇಹಿತರು ಅವನ ಶೌರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಆತನ ಸಂಬಂಧಿಕರ ಗೋಳು ಹೇಳತೀರದಾಗಿತ್ತು. ಸಾಕಷ್ಟು ಆಯ್ಕೆಗಳಿದ್ದರೂ ದೇಶಸೇವೆ ಮಾಡಬೇಕೆಂದು ಹೋಗಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಗಿರೀಶ್ ಅವರ ಸೇವೆ ಬಗ್ಗೆ ನೆರೆದಿದ್ದವರೆಲ್ಲ ಹೆಮ್ಮೆ ವ್ಯಕ್ತಪಡಿಸಿದರು.
ಅವರ ಪತ್ನಿ, ಎಳೆಯ ಮಗು, ತಂದೆ-ತಾಯಿಯರಲ್ಲಿ ದುಃಖ ಮಡುಗಟ್ಟಿತ್ತು. ಇದಕ್ಕೂ ಮುನ್ನ ಇಂದು ಬೆಳಗ್ಗೆ ವಿಶೇಷ ವಿಮಾನದಲ್ಲಿ ಹುತಾತ್ಮ ಅಕ್ಷಯ್ ಗಿರೀಶ್‍ಕುಮಾರ್ ಅವರ ಪಾರ್ಥಿವ ಶರೀರವನ್ನು ವಿಮಾನ ನಿಲ್ದಾಣಕ್ಕೆ ತಂದ ಸಂದರ್ಭದಲ್ಲಿ ಯಲಹಂಕದ ವಾಯುನೆಲೆಯಲ್ಲಿ ಮಿಲಿಟರಿ ಸಿಬ್ಬಂದಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.

ಸಚಿವ ಟಿ.ಬಿ.ಜಯಚಂದ್ರ, ಮೇಯರ್ ಜಿ.ಪದ್ಮಾವತಿ ಪಾಲ್ಗೊಂಡು ಮೃತ ಯೋಧರಿಗೆ ಅಂತಿಮ ನಮನ ಸಲ್ಲಿಸಿದರು. ಅಲ್ಲಿಂದ ಪಾರ್ಥಿವ ಶರೀರವನ್ನು ನಿವಾಸಕ್ಕೆ ಕೊಂಡೊಯ್ಯಲಾಯಿತು. ಅಂತಿಮ ದರ್ಶನದ ನಂತರ ಹೆಬ್ಬಾಳದ ಚಿತಾಗಾರದಲ್ಲಿ ಅಪಾರ ಶೋಕ ಸಾಗರದ ನಡುವೆ ಅಶ್ರುತರ್ಪಣದೊಂದಿಗೆ ಅಂತಿಮ ಸಂಸ್ಕಾರವನ್ನು ಸಂಜೆ ನೆರವೇರಿಸಲಾಗುವುದು.

ವಿಧಿಯಾಟ : ಶವವಾಗಿ ಬಂದ ಅಕ್ಷಯ್

ಬೆಂಗಳೂರು ಡಿ.01 : ಡಿಸೆಂಬರ್ 6ರಂದು ತಮ್ಮ 32 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ರಜೆ ಪಡೆದಿದ್ದ ಹುತಾತ್ಮ ಮೇಜರ್ ಅಕ್ಷಯ್ ಇಂದು(ಡಿ.01) ಬೆಂಗಳೂರಿಗೆ ಬರಬೇಕಿತ್ತು. ಆದರೆ ವಿಧಿಯಾಟ ಬಂದಿದ್ದು ಮಾತ್ರ ಆತನ ದೇಹ. ನಗ್ರೋಟಾದಲ್ಲಿ ಸೇನಾ ಕ್ಯಾಂಪ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಅವರು ಹುತಾತ್ಮರಾಗಿದ್ದಾರೆ. ನನಗೆ ರಜೆ ಸಿಕ್ಕಿದ್ದು, ಡಿಸೆಂಬರ್ 1 ರ ಬೆಳಗ್ಗೆ ಇಲ್ಲ ಮಧ್ಯಾಹ್ನ ಬೆಂಗಳೂರಿಗೆ ಬರುವುದಾಗಿ ಹೇಳಿದ್ದರು ಎನ್ನಲಾಗಿದೆ. ಡಿಸೆಂಬರ್ 6 ರಂದು ಬೆಂಗಳೂರಿನಲ್ಲೇ ತನ್ನ ಹುಟ್ಟು ಹಬ್ಬ ಆಚರಿಸಲು ಅಕ್ಷಯ ಇಚ್ಚಿಸಿದ್ದರಂತೆ.

Akshay-Girish-Kumar-01

Akshay-Girish-Kumar-03

Aksha-Girish-Kumar

Akshay-Girish-Kumar-02

Akshay-Girish-Kumar

Akshay-Girish-Kumar-04

Sri Raghav

Admin