ಅಗ್ನಿ ಸಾಕ್ಷಿಯಾಗಿ ಮದುವೆಯಾದ ಗಂಡನನ್ನು ಅಗ್ನಿ ಕುಂಡದಲ್ಲೇ ಸುಟ್ಟಳಾ ..!

Spread the love

Bhaskar

ಬೆಂಗಳೂರು,ಆ.10-ಹೋಟೆಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಪ್ರಕರಣದಲ್ಲಿ ಹೊರಗಿನ ಶತ್ರುಗಳಿಗಿಂತ, ತನ್ನವರೇ ಶತ್ರುಗಳಾಗಿದ್ದು ,  ಕೈ ಹಿಡಿದ ಹೆಂಡತಿ, ಸ್ವಂತ ಮಗನೇ ಕೊಲೆ ಮಾಡಿದ್ದನ್ನು ಕಂಡರೆ ಯಾರನ್ನು ನಂಬುವುದು, ಯಾರನ್ನು ಬಿಡುವುದು, ಯಾರಿಗಾಗಿ  ಆಸ್ತಿ ಅಂತಸ್ತು ಮಾಡುವುದು ಎಂಬಂತಾಗಿದೆ.  ಇವಳೆಂಥ ಕ್ರೂರಿ ಪತ್ನಿ. ಇವನೆಂಥ ನೀಚ ಮಗ. ತನ್ನನ್ನ ಹೊತ್ತು ಬೆಳೆಸಿದ ತಂದೆಯನ್ನು ಹೊಡೆದು ಕೊಂದ ಪಾಪಿ. ತನ್ನ ವಾಂಛೆಗಳಿಗಾಗಿ ಕೋಟ್ಯಾಧೀಶ ಪತಿಯನ್ನು ಕಣ್ಣೆದುರೇ ಬಲಿಕೊಟ್ಟ ನಿಷ್ಕರುಣಿ ಹೆಂಡತಿ ರಾಜೇಶ್ವರಿ, ಮಗ ನವನೀತನ ಪುರಾಣ ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿದೆ.   ಉಡುಪಿಯಲ್ಲಿ ಕೃಷಿ ಕುಟುಂಬದಿಂದ ಬೆಳೆದು ಬಂದ ಭಾಸ್ಕರ್ ಶೆಟ್ಟಿ ಕಾಲೇಜು ವ್ಯಾಸಂಗ ಮಾಡಿ, ಸಣ್ಣ ವ್ಯಾಪಾರ ವಹಿವಾಟು ಮಾಡಿಕೊಂಡು ಕಷ್ಟಪಟ್ಟು ಮೇಲೆ ಬಂದು, ದುಬೈನಲ್ಲಿ ಹೋಟೆಲ್ ಉದ್ಯಮ ಪ್ರಾರಂಭಿಸಿ, ಕೈತುಂಬ ಸಂಪಾದಿಸಿ ಮಂಗಳೂರಿನಲ್ಲೂ ವ್ಯಾಪಾರ ವಹಿವಾಟು ನಡೆಸಿಕೊಂಡು ಸುಮಾರು 300 ಕೋಟಿಗೂ ಹೆಚ್ಚು ಆಸ್ತಿ ಗಳಿಸಿದ್ದರು. ಇದ್ದ ಒಬ್ಬ ಮಗ ಪತ್ನಿಗೆ ಯಾವುದು ಕಮ್ಮಿಯಾಗದಂತೆ ನೋಡಿಕೊಂಡಿದ್ದ. ಆದರೆ ಇವರ ಐಷಾರಾಮಿ ಬದುಕಿನ ಪಿತ್ತ ನೆತ್ತಿಗೇರಿ, ಇವರ ವಾಂಛೆಗಳು ಬದುಕಿನ ಚಂಚಲತೆಯ ಚಿತ್ತ ಬೇರೆ ಕಡೆ ಹರಿದಿತ್ತು.

ಇವರ ಸಂಸಾರಕ್ಕೆ ಎಂಟ್ರಿಯಾದವನು ನಿರಂಜನ ಭಟ್ಟ. ಈತನ ಜೊತೆ ಸೇರಿಕೊಂಡು ಭಾಸ್ಕರ್ ಶೆಟ್ಟಿ ಮಗ ಜಿಮ್‍ವೊಂದನ್ನು ಪ್ರಾರಂಭಿಸಿದ್ದ. ಇದಕ್ಕೂ ಬಂಡವಾಳ ಹಾಕಿದ್ದು ಭಾಸ್ಕರ್ ಶೆಟ್ಟಿಯವರೇ. ಇದರ ಪ್ರಾರಂಭೋತ್ಸವವನ್ನೂ ಕೂಡ ಅವರೇ ಮಾಡಿಕೊಟ್ಟಿದ್ದರು.   ಈ ಜಿಮ್‍ಗೆ ಬರುವ ಹುಡುಗಿಯರ ಶೋಕಿ ಬೆಳೆಸಿಕೊಂಡಿದ್ದ ಭಾಸ್ಕರ್ ಶೆಟ್ಟಿಯ ಮಗನ ಡಿಂಗಿಚಿಕ್ಕಿ ಹೆಚ್ಚಾಗಿತ್ತು. ನಿರಂಜನ ಭಟ್ಟ , ನವನೀತ, ಈತನ ತಾಯಿ ರಾಜೇಶ್ವರಿ ಆಧುನಿಕ ಆಕರ್ಷಣೆಗಳಿಗೆ ಒಳಗಾಗಿ, ಐಷಾರಾಮಿ ಬದುಕಿಗೆ ಮಾರು ಹೋಗಿದ್ದರು.   ಡಿಸ್ಕೋ ಥೆಕ್‍ಗಳು, ತಡರಾತ್ರಿ ಪಾರ್ಟಿಗಳಿಗೆ ಹೋಗುವುದು ಮಾಮೂಲಿಯಾಗಿತ್ತು. ಒಂದು ಹಂತದಲ್ಲಿ ನಿರಂಜನ ಭಟ್ಟನ ಮೇಲೆ ರಾಜೇಶ್ವರಿಯ ಆಕರ್ಷಣೆ ಹೆಚ್ಚಾಗಿತ್ತು ಎಂದು ಜನ ಮಾತನಾಡಿಕೊಳ್ಳತ್ತಿದ್ದರು. ಇದು ಭಾಸ್ಕರ್ ಶೆಟ್ಟಿಗೆ ಸಾಕಷ್ಟು ಕಿರಿಕಿರಿಯಾಗಿತ್ತು.

ತನ್ನ ವರ್ತನೆ ಬದಲಾಯಿಸಿಕೊಳ್ಳುವಂತೆ ಹೇಳಿದರೂ ಇವರ್ಯಾರು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ಇವರಿಗೆಲ್ಲ ಬುದ್ದಿ ಕಲಿಸಬೇಕು ಎಂದು ತಮ್ಮ ಆಸ್ತಿಯಲ್ಲಿ ಬಿಡಿಗಾಸು ಸಿಗದಂತೆ ಮಾಡುತ್ತೇನೆ, ನಿನಗೆ ವಿಚ್ಛೇಧನ ಕೊಡುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದ.   ತಮ್ಮ ನಡೆಯನ್ನು ಬದಲಿಸಿಕೊಳ್ಳದೆ ಗಂಡನ ಮೇಲೆ ದ್ವೇಷಕಾರಿದ ರಾಜೇಶ್ವರಿ ಅಪ್ಪನ ಮೇಲೆ ವಿಷಕಾರಿದ ಮಗ ನವನೀತ್ ಶೆಟ್ಟಿಯನ್ನು ಮುಗಿಸುವ ಸ್ಕೆಚ್ಚನ್ನೇ ರೂಪಿಸಿದರು. ಅದು ಮಾತ್ರ ಯಾರೂ ಕಂಡುಕೇಳರಿಯದಂತಹ ಭಯಾನಕವಾದ ಕೊಲೆಯ ಸ್ಕೆಚ್.   ತಾಯಿ-ಮಗ ನನ್ನನ್ನು ಮುಗಿಸುತ್ತಾರೆ. ಕೊಲೆಯ ಸಂಚು ನಡೆಯುತ್ತಿದೆ ಎಂಬ ಅರಿವು ಭಾಸ್ಕರ್ ಶೆಟ್ಟಿಗೆ ಬಂದಿದೆ. ಹಾಗಾಗಿ ಆತ ಮನೆಯಲ್ಲಿ ಮಲಗುತ್ತಿರಲಿಲ್ಲ. ಉಡುಪಿಯ ಹೋಟೆಲ್‍ನಲ್ಲಿ ತಂಗುತ್ತಿದ್ದ. ಬೆಳಗ್ಗೆ ಬಂದು ಸ್ನಾನ ಮಾಡಿ ಹೋಗುತ್ತಿದ್ದ.

ಈ ಸಂದರ್ಭವನ್ನು ಬಳಸಿಕೊಂಡು ತಾಯಿ-ಮಗ ಸೇರಿಕೊಂಡು ಈತನನ್ನು ಕೊಲೆ ಮಾಡಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಅದು ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು ಬಾತ್‍ಟಬ್‍ನಲ್ಲಿ ಮುಳುಗಿಸಿ ನಂತರ ವಿಷ ಕುಡಿಸಿ ಸಾಯಿಸುತ್ತಾರೆ ಎಂದರೆ ತಾಯಿಮಗ ಎಷ್ಟು ಕ್ರೂರಿಗಳಾಗಿರಬೇಕು.   ನಂತರ ನಿರಂಜನ್ ಭಟ್ ಜೊತೆ ಸೇರಿಕೊಂಡು ಶವವನ್ನು ಹೋಮಕುಂಡದಲ್ಲಿ ಸುಟ್ಟು ನದಿಗೆ ಎಸೆದಿದ್ದಾರೆ ಅಂದರೆ ಎಷ್ಟು ವಿಕೃತ ಮನೋಭಾವದವರಾಗಿರಬೇಕು. ಕಾನೂನು ಪ್ರಕಾರ ಗಂಡನಿಂದ ಬಿಡುಗಡೆ ಪಡೆದುಕೊಂಡಿದ್ದರೆ ಅವನ ಆಸ್ತಿಯಲ್ಲಿ ಅರ್ಧ ಆಸ್ತಿ ಪತ್ನಿಗೆ ಸೇರುತ್ತಿತ್ತು.
ಅಥವಾ ಗಂಡನನ್ನು ಚೆನ್ನಾಗಿ ನೋಡಿಕೊಂಡಿದ್ದರೆ ಸಮಸ್ತ ಆಸ್ತಿಗೂ ಮಗ ಒಡೆಯನಾಗುತ್ತಿದ್ದ. ಇಂಥ ಕನಿಷ್ಠ ಅರಿವು ಅವರಿಗೆ ಬರಲಿಲ್ಲವೇ. ತೆವಲುಗಳ ಹಿಂದೆ ಬಿದ್ದು  ಈಗ ಪೆÇಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾರೆ.

ಮತ್ತೊಂದು ದುರಂತವೆಂದರೆ ಈ ಪ್ರಕರಣದಲ್ಲಿ ಆರೋಪಿಗಳು ಸಾಕಷ್ಟು ಬುದ್ಧಿವಂತಿಕೆ ಉಪಯೋಗಿಸಿ ಕೊಲೆ ಮಾಡಿದ್ದಾರೆ. ಪೆÇಲೀಸರಿಗೆ ಯಾವುದೇ ಸಾಕ್ಷ್ಯಾಧಾರಗಳು ಸಿಗದಂತೆ ನೋಡಿಕೊಂಡಿದ್ದಾರೆ. ಈವರೆಗಿನ ತನಿಖೆಯಲ್ಲಿ ಇನ್ನ್ನೂ ಪೊಲೀಸರಿಗೆ ಸಾಕ್ಷ್ಯಗಳು ಲಭ್ಯವಾಗಿಲ್ಲ.  ಆಸ್ತಿ ಇದ್ದರೂ ಕಷ್ಟ. ಆಸ್ತಿ ಇಲ್ಲದಿದ್ದರೂ ಕಷ್ಟ. ಕಷ್ಟಪಟ್ಟು ಆಸ್ತಿ ಸಂಪಾದಿಸುತ್ತಾರೆ. ಆದರೆ ಅದನ್ನು ಅನುಭವಿಸುವ ಋಣ ಎಲ್ಲರಿಗೂ ಇರುವುದಿಲ್ಲ. ಉಡುಪಿಯ ಭಾಸ್ಕರ್ ಶೆಟ್ಟಿ  ಕಷ್ಟಪಟ್ಟು 300 ಕೋಟಿಯಷ್ಟು ಆಸ್ತಿ ಸಂಪಾದಿಸಿದ್ದರು.  ಆದರೆ ತನ್ನ ಹೆಂಡತಿ, ಮಗನಿಂದಲೇ ಕೊಲೆಯಾದರು. ಇಷ್ಟು ಪ್ರಮಾಣದ ಆಸ್ತಿ ಸಂಪಾದಿಸಿ ಈತ ತನ್ನನ್ನು ತಾನು ರಕ್ಷಿಸಿಕೊಳ್ಳುವ ಕನಿಷ್ಠ ವ್ಯವಸ್ಥೆಯನ್ನೂ ಮಾಡಿಕೊಂಡಿರಲಿಲ್ಲ. ಬಾಡಿಗಾರ್ಡ್‍ಗಳಾಗಲಿ, ಪ್ರತ್ಯೇಕ ಭದ್ರತಾ ಸಿಬ್ಬಂದಿಯನ್ನಾಗಲಿ ನೇಮಿಸಿಕೊಳ್ಳದಿರುವುದು ದುರದೃಷ್ಟಕರ.   ತನ್ನವರಿಂದಲೇ ತನಗೆ ಅಪಾಯವಿದೆ ಎಂಬ ಅರಿವು ಬಂದಾಗಲಾದರೂ ಎಚ್ಚೆತ್ತುಕೊಂಡು ರಕ್ಷಣೆ ಮಾಡಿಕೊಳ್ಳಬೇಕಿತ್ತು. ಆದರೆ ನಂಬಿ ಹೋಮಕ್ಕೆ ಬಲಿಯಾಗಿರುವುದು ದುರಂತ.

  • ಕೆ. ಎಸ್. ಜನಾರ್ಧನ್

► Follow us on –  Facebook / Twitter  / Google+

Sri Raghav

Admin