ಅಗ್ರಕ್ರಮಾಂಕದಲ್ಲಿ ಉಳಿಯುವುದೇ ಗುರಿ : ಕೊಹ್ಲಿ

Kohli--01

ಬೆಂಗಳೂರು,ಮಾ.9- ವಿಶ್ವದ ಅಗ್ರ ಕ್ರಮಾಂಕದ ಶ್ರೇಷ್ಠ ಆಟಗಾರನಾಗಿ ನಿರಂತರವಾಗಿ ಟೆಸ್ಟ್ , ಏಕದಿನ ಸೇರಿದಂತೆ ಮೂರೂ ವಿಭಾಗಗಳಲ್ಲಿ ತನ್ನ ಫಾರ್ಮ್‍ನ್ನು ಉತ್ತಮಪಡಿಸಿಕೊಂಡು ಭಾರತ ತಂಡವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಅಭಿಲಾಷೆ ಹೊಂದಿರುವುದಾಗಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.   ನಿನ್ನೆ ನಡೆದ ಸಮಾರಂಭವೊಂದರಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ಅತ್ಯುತ್ತಮ ಪ್ರಶಸ್ತಿಯಾದ ಪಾಲಿ ಉಮ್ರಿಗಾರ್ ವರ್ಷದ ಪ್ರಶಸ್ತಿ ಸ್ವೀಕರಿಸಿದ ವೇಳೆ ಮಾತನಾಡಿದ ಅವರು, ವಿಶ್ವದ ಅತ್ಯುತ್ತಮ ಆಟಗಾರರ ಪಟ್ಟಿಯಲ್ಲಿ ಸದಾ ಕಾಣಿಸಿಕೊಳ್ಳಬೇಕು ಎಂದು ಹೇಳಿದರು.

ಕ್ರಿಕೆಟ್ ಕ್ಷೇತ್ರಕ್ಕೆ ನನ್ನಂತೆ ಇತರೆ ಆಟಗಾರರು ಪಾದರ್ಪಾಣೆ ಮಾಡಿದ್ದಾರೆ. ಕೆಲವರು ಪರ, ವಿರೋಧ ಟೀಕೆಗಳು ಮಾಡುತ್ತಿರುತ್ತಾರೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸದಾ ಆಟದ ಬಗ್ಗೆ ಗಮನಹರಿಸಿ ನಮ್ಮ ಬಗ್ಗೆ ನಂಬಿಕೆ ಇಟ್ಟುಕೊಳ್ಳಬೇಕು ಎಂದು ಯುವ ಆಟಗಾರರಿಗೆ ಸಲಹೆ ಮಾಡಿದರು.   ಪಾಲಿ ಉಮ್ರಿಗಾರ್ ಪ್ರಶಸ್ತಿ ಪಡೆದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin