ಅಗ್ರಾದಲ್ಲಿ ರಾಹುಲ್-ಅಖಿಲೇಶ್ ಜಂಟಿ ರೋಡ್ ಶೋ

Spread the love

Akhile4sh-and-Rahul

ಅಗ್ರಾ, ಫೆ.3 – ಉತ್ತರಪ್ರದೇಶ ಚುನಾವಣೆ ರಂಗೇರುತ್ತಿದ್ದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಇಲ್ಲಿ ಜಂಟಿ ಚುನಾವಣಾ ಪ್ರಚಾರ ಕೈಗೊಂಡರು. ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಅಧಿಕಾರಕ್ಕೆ ಬರುವುದನ್ನು ತಡೆಯಲು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ಮಹಾಮೈತ್ರಿ ಮಾಡಿಕೊಂಡಿದೆ ಎಂದು ಈ ಇಬ್ಬರು ನಾಯಕರು ಘೋಷಿಸಿದರು.   ರಾಹುಲ್-ಅಖಿಲೇಶ್ ರೋಡ್ ಶೋನಲ್ಲಿ ಎರಡೂ ಪಕ್ಷಗಳ ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದ್ದರು. ಕಳೆದ ವಾರ ಇವರು ಲಕ್ನೋದಲ್ಲಿ ಜಂಟಿಯಾಗಿ ಚುನಾವಣಾ ಪ್ರಚಾರ ನಡೆಸಿ ಗಮನಸೆಳೆದಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin