ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಅ.17- ಬೆಂಗಳೂರು ವಿಶ್ವವಿದ್ಯಾಲಯದ ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ವಿಭಾಗದಲ್ಲಿ ಎಂಬಿಎ (ಫೈನಾನ್ಸ್/ ಮಾರ್ಕೆಟಿಂಗ್/ ಹ್ಯುಮನ್ ರಿಸೋರ್ಸ್) ತರಗತಿಗಳ ಬೋಧನೆಗಾಗಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಎಂಬಿಎ ಜೊತೆಗೆ ಪಿಎಚ್ಡಿ/ ಎನ್ಇಟಿ/ ಎಸ್ಎಲ್ಇಟಿ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಒಂದು ವೇಳೆ ಈ ಮೇಲ್ಕಂಡ ಅರ್ಹ ಅಭ್ಯರ್ಥಿಗಳು ಲಭ್ಯವಾಗದ ಪಕ್ಷದಲ್ಲಿ ಭೋದನಾ ಅನುಭವವುಳ್ಳ ಅಥವಾ ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸದ ಅನುಭವವುಳ್ಳ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸಲಾಗುವುದು ಎಂದು ಜೆಬಿ ಕ್ಯಾಂಪಸ್ ಸಂಚಾಲಕ ಡಾ.ವೈ.ನಾಗರಾಜ್ ತಿಳಿಸಿದ್ದಾರೆ.
ಆಸಕ್ತರು ಶೀಘ್ರವೇ ಬಿಳಿ ಹಾಳೆಯಲ್ಲಿ ತಮ್ಮ ಸ್ವ -ವಿವರಗಳನ್ನು ಒಳಗೊಂಡ ದಾಖಲಾತಿಗಳೊಂದಿಗೆ ಒಂದು ಪ್ರತಿಯನ್ನು ಸಂಯೋಜಕರು, ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ , ಬೆಂಗಳೂರು -560056, ಇವರಿಗೆ ಅ.22ರಂದು ಸಂಜೆ 5 ಗಂಟೆಯೊಳಗೆ ಖುದ್ದಾಗಿ ತಲುಪಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
ದೂರವಾಣಿ ಸಂಖ್ಯೆ 9448558169/ 9902735644.