ಅತಿಯಾದ ಮದ್ಯ ಸೇವಿಸಿ ಯುವಕ ಸಾವು
ಮೈಸೂರು,ಫೆ.6-ಅತಿಯಾದರೆ ಅಮೃತನೂ ವಿಷವಾಗುತ್ತೆ. ಆದರೆ ಸ್ಲೋ ಪಾಯಸನ್ನಂತಿರುವ ಮದ್ಯವನ್ನು ಕಂಠಪೂರ್ತಿ ಕುಡಿದರೆ ಇನ್ನೇಲ್ಲಿ ಬದುಕುತ್ತಾರೆ. ಇಲ್ಲೊಬ್ಬ ಯುವಕ ಅತಿಯಾಗಿ ಮದ್ಯ ಸೇವಿಸಿ ಸಾವನ್ನಪ್ಪಿರುವ ಘಟನೆ ಕೆ.ಆರ್.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಟಿ.ನರಸೀಪುರ ತಾಲ್ಲೂಕು ಹಸುವಟ್ಟಿಗೆ ಗ್ರಾಮದ ನಿವಾಸಿ ಭರತ್(20) ಮೃತಪಟ್ಟಿರುವ ಯುವಕ. ಈತ ನಿನ್ನೆ ಅತಿಯಾಗಿ ಮದ್ಯಸೇವಿಸಿ ಅಗ್ರಹಾರ ರಸ್ತೆ ಬಳಿ ಬಿದ್ದಿದ್ದು, ಬೆಳಗೆಯಾದರೂ ಮೇಲೇಳದ ಕಾರಣ ದಾರಿಹೋಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿ, ನಗರದ ಬಾರ್ವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈತ ಅತಿಯಾಗಿ ಮದ್ಯ ಸೇವಿಸಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಶವವನ್ನು ಮೈಸೂರು ಮೆಡಿಕಲ್ ಕಾಲೇಜು ಶವಾಗಾರಕ್ಕೆ ಕಳುಹಿಸಲಾಗಿದ್ದು , ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >