ಅತಿ ವೇಗದ 11,000 ರನ್ ಗಳಿಸಿದ ಅಲಿಸ್ಟರ್ ಕುಕ್

Cook-01

ಚೆನ್ನೈ, ಡಿ. 16- ಕ್ರಿಕೆಟ್ ಇತಿಹಾಸದಲ್ಲೇ ಕಡಿಮೆ ಅವಧಿಯಲ್ಲೇ (10 ವರ್ಷ, 290 ದಿನ) ವೇಗದ 11 ಸಾವಿರ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್ ಪಾತ್ರರಾಗಿದ್ದಾರೆ.  ಇಂದಿಲ್ಲಿ ಆರಂಭಗೊಂಡಿರುವ ಭಾರತ ವಿರುದ್ಧದ ಅಂತಿಮ ಟೆಸ್ಟ್‍ನಲ್ಲಿ 2 ರನ್‍ಗಳನ್ನು ಬಾರಿಸುತ್ತಿದ್ದಂತೆ ಈ ಸಾಧನೆ ಅಲಿಸ್ಟರ್ ಕುಕ್ ಹೆಸರಿಗೆ ಬದಲಾಯಿಸಿತು. ಇದಕ್ಕೂ ಮುಂಚೆ ಶ್ರೀಲಂಕಾದ ಕುಮಾರಸಂಗಾಕಾರ ತಮ್ಮ ಕ್ರಿಕೆಟ್ ಜೀವನದ 13 ವರ್ಷ 199ನೆ ದಿನದಲ್ಲಿ 122 ಪಂದ್ಯಗಳ 208 ಇನ್ನಿಂಗ್ಸ್‍ಗಳಿಂದ ಈ ಸಾಧನೆಯನ್ನು ಮಾಡಿದ್ದರು.

ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಕುಕ್ 9 ಇನ್ನಿಂಗ್ಸ್‍ನಿಂದ 320 ರನ್‍ಗಳನ್ನು ಮಾತ್ರ ಬಾರಿಸಿದ್ದಾರೆ. ಈ ಸರಣಿಯ ನಂತರ ಕುಕ್ ನಾಯಕತ್ವವನ್ನು ಕಳೆದುಕೊಂಡರೂ ಕೂಡ ಇಂದು ಅವರು ಮಾಡಿರುವ ಸಾಧನೆಯಿಂದ ಆ ಬೇಸರ ಮರೆಮಾಚುವಂತಾಗಿದೆ. ಅಲಿಸ್ಟರ್ ಕುಕ್ ಇದುವರೆಗೆ 140 ಟೆಸ್ಟ್ ಪಂದ್ಯಗಳ 252 ಇನ್ನಿಂಗ್ಸ್‍ನಿಂದ 11008 ರನ್‍ಗಳನ್ನು ಗಳಿಸಿದ್ದು 294 ಗರಿಷ್ಠ ರನ್ ಆಗಿದ್ದು ಇದರಲ್ಲಿ 30 ಶತಕ ಹಾಗೂ 53 ಅರ್ಧಶತಕಗಳು ಒಳಗೊಂಡಿವೆ.  11,000 ರನ್ ಗಳಿಸಿದ ಮೋಡ ಇಂಗ್ಲೆಂಡ್ ಆಟಗಾರ ಎಂಬ ಕೀರ್ತಿಗೂ ಕುಕ್ ಪಾತ್ರರಾದರು.

ಅತಿ ವೇಗವಾಗಿ 11,000 ರನ್ ಗಳಿಸಿದ ಆಟಗಾರರು:

ಬ್ರಿಯಾನ್ ಲಾರಾ- ವೆಸ್ಟ್‍ಇಂಡೀಸ್- 121 ಪಂದ್ಯ (213 ಇ)- 14ವರ್ಷ 354 ದಿನ
ರಿಕ್ಕಿ ಪಾಂಟಿಂಗ್- ಆಸ್ಟ್ರೇಲಿಯಾ- 132 ಪಂದ್ಯ (222 ಇ)- 13 ವರ್ಷ 212 ದಿನ
ಸಚಿನ್ ತೆಂಡೂಲ್ಕರ್- ಭಾರತ- 139 ಪಂದ್ಯ (223 ಇ)- 17 ವರ್ಷ 254 ದಿನ
ರಾಹುಲ್ ದ್ರಾವಿಡ್- ಭಾರತ- 135 ಪಂದ್ಯ (234 ಇ)-13 ವರ್ಷ 149 ದಿನ
ಜಾಕ್ ಕಾಲಿಸ್- ದಕ್ಷಿಣಆಫ್ರಿಕಾ-139 ಪಂದ್ಯ (234 ಇ)- 14 ವರ್ಷ 186 ದಿನ
ಮಹೇಲಾ ಜಯವರ್ಧನೆ- ಶ್ರೀಲಂಕಾ-141 ಪಂದ್ಯ (237 ಇ)- 16 ವರ್ಷ 167 ದಿನ
ಶಿವನಾರಾಯಣ್ ಚಂದ್ರಪಾಲ್- ವೆಸ್ಟ್‍ಇಂಡೀಸ್-151 ಪಂದ್ಯ(256 ಇ)- 19 ವರ್ಷ 261 ದಿನ
ಅಲನ್ ಬಾರ್ಡರ್- ಆಸ್ಟ್ರೇಲಿಯಾ- 153 ಪಂದ್ಯ (259 ಇ)- 15 ವರ್ಷ 30 ದಿನ

>  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin