ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಸ್ಕೂಟಿ ಸವಾರ ಸ್ಥಳದಲ್ಲೇ ಸಾವು

Accident--01

ಹೆಚ್.ಡಿ.ಕೋಟೆ, ಮಾ.24-ಕೇರಳ ಕಡೆಯಿಂದ ಅತಿವೇಗವಾಗಿ ಬಂದ ಕಾರು ಎದುರಿನಿಂದ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ಎಚ್.ಡಿ.ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ತಾಲ್ಲೂಕಿನ ದೊರೆಸ್ವಾಮಿ(55) ಮತ್ತು ಸವ್ವೆಮಾಳದ ರವಿ(26) ಮೃತಪಟ್ಟ ದುರ್ದೈವಿಗಳು. ಕಂಟ್ರಾಕ್ಟರ್ ಆಗಿದ್ದ ದೊರೆಸ್ವಾಮಿ ಅವರೊಂದಿಗೆ ಕಾರ್ಯ ನಿಮಿತ್ತ ರವಿ ಸ್ಕೂಟಿಯಲ್ಲಿ ಸೋಗಳ್ಳಿಗೆ ಹೋಗುತ್ತಿದ್ದಾಗ ಇಂದು ಬೆಳಗ್ಗೆ 7.30ರ ಸಮಯದಲ್ಲಿ ಮೈಸೂರು-ಮಾನಂದವಾಡಿ ರಸ್ತೆಯ ಸೋಗಳ್ಳಿ ಗೇಟ್ ಬಳಿ ಕೇರಳ ಕಡೆಯಿಂದ ಬರುತ್ತಿದ್ದ ಕಾರು ಇವರ ಸ್ಕೂಟಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಪರಿಣಾಮ ದೊರೆಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ರವಿ ಅವರನ್ನು ಸಾರ್ವಜನಿಕರು ತಕ್ಷಣ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಬೀಚನಹಳ್ಳಿ ಠಾಣೆ ಸಬ್‍ಇನ್‍ಸ್ಪೆಕ್ಟರ್ ರಾಮಚಂದ್ರ, ಸಿಬ್ಬಂದಿಗಳಾದ ರಮೇಶ್, ಸತೀಶ್, ದಿನೇಶ್ ಸ್ಥಳಕ್ಕಾಗಮಿಸಿ ಇಬ್ಬರ ಶವಗಳನ್ನು ಎಚ್.ಡಿ.ಕೋಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಮೃತರ ಪೆÇೀಷಕರು, ಸಂಬಂಧಿಕರ ಆರ್ತನಾದ ಮುಗಿಲು ಮುಟ್ಟಿತ್ತು.

Sri Raghav

Admin