ಅತ್ಯಾಕರ್ಷಕ ಮಿಲಿಟರಿ ಬ್ಯಾಂಡ್ ಉತ್ಸವ

Spread the love

ಅತ್ಯಾಕರ್ಷಕ  ಮಿಲಿಟರಿ ಬ್ಯಾಂಡ್ ಉತ್ಸವ ಮಿಲಿಟರಿ ಬ್ಯಾಂಡ್ ಶಿಸ್ತು ಮತ್ತು ಸುಶ್ರಾವ್ಯ ಸಂಗೀತದ ಅಪರೂಪದ ಸಂಯೋಜನೆ. ರಷ್ಯಾದಲ್ಲಿ ಪ್ರತಿವರ್ಷ ನಡೆಯು ಅಂತಾರಾಷ್ಟ್ರೀಯ ಸೇನಾ ವಾದ್ಯಮೇಳ ವಿಶ್ವವಿಖ್ಯಾತ.    ರಷ್ಯಾ ರಾಜಧಾನಿ ಮಾಸ್ಕೋದ ಸಂಸತ್ ಕ್ರೆಮ್ಲಿಲ್ ಮುಂದೆ ರೆಡ್‍ಸ್ಕ್ವೆರ್‍ನಲ್ಲಿ ಈಚೆಗೆ ಏಳನೇ ಇಂಟರ್‍ನ್ಯಾಷನಲ್ ಮಿಲಿಟರಿ ಬ್ಯಾಂಡ್ ಫೆಸ್ಟಿವಲ್ ನಡೆಯಿತು. ಈ ಅಂತಾರಾಷ್ಟ್ರೀಯ ಉತ್ಸವದಲ್ಲಿ ಯುರೋಪ್ ಮತ್ತು ಏಷ್ಯಾ ಸೇರಿದಂತೆ ವಿಶ್ವದ ವಿವಿಧ ದೇಶಗಳ 14 ಸೇನಾ ಬ್ಯಾಂಡ್‍ಗಳ ಒಂದು ಸಾವಿರ ಸಂಗೀತಗಾರರು ಪಾಲ್ಗೊಂಡರು.  ಜನಪ್ರಿಯ ಮಾರ್ಡನ್ ಮೆಲೋಡಿಗೆ ಶಾಸ್ತ್ರೀಯ ಸಂಗೀತ ಸ್ಪರ್ಶದೊಂದಿಗೆ ಆಕರ್ಷಕ ಪಥಸಂಚಲನ ನಡೆಸಿದರು. ಬಣ್ಣಬಣ್ಣಗಳ ಬೆಳಕಿನ ಹಿನ್ನಲೆ ವರ್ಣಮಯ ಸೇನಾ ಸಮವಸ್ತ್ರದೊಂದಿಗೆ ವಿಭಿನ್ನ  ಸಂಗೀತ ಸಾಧನಗಳಿಂದ ಲಯಬದ್ಧ ರಿದಂ ಮೊಳಗಿಸುತ್ತಾ ಯೋಧರು ಶಿಸ್ತುಬದ್ಧ ಪೆರೇಡ್ ನಡೆಸಿದರು. ಈ ವರ್ಣರಂಜಿತ ಮ್ಯೂಸಿಕ್ ಮತ್ತು ಪೇರೆಡ್‍ನನ್ನು 75 ಸಾವಿರಕ್ಕೂ ಹೆಚ್ಚು ಮಂದಿ ಕಣ್ತುಂಬಿಕೊಂಡರು. ಸಂಗೀತದೊಂದಿಗೆ ಪ್ರೇಕ್ಷಕರ ಕರತಾಡನದ ಮೊರೆತವೂ ಮಾರ್ದನಿಸಿತು.   ಈ ವೈಭವೋಪೇತ ವರ್ಣರಂಜಿತ ಸಮಾರಂಭದಲ್ಲಿ ಇಂಟರ್‍ನ್ಯಾಷನಲ್ ಮಿಲಿಟರಿ ಬ್ಯಾಂಡ್‍ಗಳ ನಿನಾದ ದಶದಿಕ್ಕುಗಳಲ್ಲೂ ಮೊಳಗಿದವು.  ಸೇಂಟ್ ಬೆಸಿಲ್ಸ್ ಕ್ಯಾಥೆಡ್ರಾಲ್‍ನ ಗೋಡೆಗಳ ಮೇಲೆ ಪ್ರತಿಬಿಂಬಿಸಲಾದ ಆತ್ಯಾಕರ್ಷಕ ಬೆಳಕಿನ ಪ್ರದರ್ಶನ ಮತ್ತು ಸಿಡಿಮದ್ದು-ಬಾಣಬಿರುಸುಗಳ ವೈಭವದೊಂದಿಗೆ ಉತ್ಸವ ಸಮಾರೋಪಗೊಂಡಿತು.

ಮಿಲಿಟರಿ ಬ್ಯಾಂಡ್ ಶಿಸ್ತು ಮತ್ತು ಸುಶ್ರಾವ್ಯ ಸಂಗೀತದ ಅಪರೂಪದ ಸಂಯೋಜನೆ. ರಷ್ಯಾದಲ್ಲಿ ಪ್ರತಿವರ್ಷ ನಡೆಯು ಅಂತಾರಾಷ್ಟ್ರೀಯ ಸೇನಾ ವಾದ್ಯಮೇಳ ವಿಶ್ವವಿಖ್ಯಾತ.ರಷ್ಯಾ ರಾಜಧಾನಿ ಮಾಸ್ಕೋದ ಸಂಸತ್ ಕ್ರೆಮ್ಲಿಲ್ ಮುಂದೆ ರೆಡ್‍ಸ್ಕ್ವೆರ್‍ನಲ್ಲಿ ಈಚೆಗೆ ಏಳನೇ ಇಂಟರ್‍ನ್ಯಾಷನಲ್ ಮಿಲಿಟರಿ ಬ್ಯಾಂಡ್ ಫೆಸ್ಟಿವಲ್ ನಡೆಯಿತು. ಈ ಅಂತಾರಾಷ್ಟ್ರೀಯ ಉತ್ಸವದಲ್ಲಿ ಯುರೋಪ್ ಮತ್ತು ಏಷ್ಯಾ ಸೇರಿದಂತೆ ವಿಶ್ವದ ವಿವಿಧ ದೇಶಗಳ 14 ಸೇನಾ ಬ್ಯಾಂಡ್‍ಗಳ ಒಂದು ಸಾವಿರ ಸಂಗೀತಗಾರರು ಪಾಲ್ಗೊಂಡರು.ಜನಪ್ರಿಯ ಮಾರ್ಡನ್ ಮೆಲೋಡಿಗೆ ಶಾಸ್ತ್ರೀಯ ಸಂಗೀತ ಸ್ಪರ್ಶದೊಂದಿಗೆ ಆಕರ್ಷಕ ಪಥಸಂಚಲನ ನಡೆಸಿದರು. ಬಣ್ಣಬಣ್ಣಗಳ ಬೆಳಕಿನ ಹಿನ್ನಲೆ ವರ್ಣಮಯ ಸೇನಾ ಸಮವಸ್ತ್ರದೊಂದಿಗೆ ವಿಭಿನ್ನ ಸಂಗೀತ ಸಾಧನಗಳಿಂದ ಲಯಬದ್ಧ ರಿದಂ ಮೊಳಗಿಸುತ್ತಾ ಯೋಧರು ಶಿಸ್ತುಬದ್ಧ ಪೆರೇಡ್ ನಡೆಸಿದರು. ಈ ವರ್ಣರಂಜಿತ ಮ್ಯೂಸಿಕ್ ಮತ್ತು ಪೇರೆಡ್‍ನನ್ನು 75 ಸಾವಿರಕ್ಕೂ ಹೆಚ್ಚು ಮಂದಿ ಕಣ್ತುಂಬಿಕೊಂಡರು. ಸಂಗೀತದೊಂದಿಗೆ ಪ್ರೇಕ್ಷಕರ ಕರತಾಡನದ ಮೊರೆತವೂ ಮಾರ್ದನಿಸಿತು. ಈ ವೈಭವೋಪೇತ ವರ್ಣರಂಜಿತ ಸಮಾರಂಭದಲ್ಲಿ ಇಂಟರ್‍ನ್ಯಾಷನಲ್ ಮಿಲಿಟರಿ ಬ್ಯಾಂಡ್‍ಗಳ ನಿನಾದ ದಶದಿಕ್ಕುಗಳಲ್ಲೂ ಮೊಳಗಿದವು. ಸೇಂಟ್ ಬೆಸಿಲ್ಸ್ ಕ್ಯಾಥೆಡ್ರಾಲ್‍ನ ಗೋಡೆಗಳ ಮೇಲೆ ಪ್ರತಿಬಿಂಬಿಸಲಾದ ಆತ್ಯಾಕರ್ಷಕ ಬೆಳಕಿನ ಪ್ರದರ್ಶನ ಮತ್ತು ಸಿಡಿಮದ್ದು-ಬಾಣಬಿರುಸುಗಳ ವೈಭವದೊಂದಿಗೆ ಉತ್ಸವ ಸಮಾರೋಪಗೊಂಡಿತು.

Facebook Comments

Sri Raghav

Admin