ಅತ್ಯಾಚಾರ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಸಚಿವ ಗಾಯತ್ರಿ ಪ್ರಜಾಪತಿ ನಾಪತ್ತೆ

Spread the love

Gathri-Prajapathi--01

ಲಕ್ನೋ, ಮಾ.1- ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ಸಚಿವ ಗಾಯತ್ರಿ ಪ್ರಜಾಪತಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ, ಸಚಿವ ದಿಢೀರ್ ನಾಪತ್ತೆಯಾಗಿದ್ದಾರೆ. ಸಚಿವರ ಜಾಡು ಹಿಡಿಯಲು ಪೊಲೀಸರು ಜಾಲ ಬೀಸಿದ್ದಾರೆ.  ಪ್ರಜಾಪತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ, ರಾಜ್ಯ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಈ ವಿವಾದಾತ್ಮಕ ಸಚಿವನನ್ನು ಅಖಿಲೇಶ್ ಯಾದವ್ ಸಂಪುಟದಿಂದ ವಜಾ ಮಾಡಿದ್ದರು. ಆದರೆ ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗುವಲ್ಲಿ, ಮುಲಾಯಂ ಸಿಂಗ್ ಯಾದವ್‍ಗೆ ನಿಷ್ಠರಾಗಿದ್ದ ಪ್ರಜಾಪತಿ ಯಶಸ್ವಿಯಾಗಿದ್ದರು. ಪ್ರಜಾಪತಿ ಅಮೇಥಿ ಕ್ಷೇತ್ರದಿಂದ ಸಮಾಜವಾದಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಅವರ ಪ್ರಚಾರಸಭೈಯಲ್ಲಿ ವೇದಿಕೆ ಹಂಚಿಕೊಳ್ಳಲು ಸಿಎಂ ನಿರಾಕರಿಸಿದ್ದರು.

ಕೊನೆಯ ಎರಡು ಹಂತದ ಮತದಾನ ಬಾಕಿ ಇರುವ ಹಿನ್ನೆಲೆಯಲ್ಲಿ, ಪ್ರಜಾಪತಿಯವರನ್ನು ಮತ್ತೆ ಸಂಪುಟಕ್ಕೆ ಏಕೆ ಸೇರಿಸಿಕೊಳ್ಳಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸುವುದು ಸಿಎಂಗೆ ತಲೆನೋವಾಗಿ ಪರಿಣಮಿಸಿದೆ. ಅಖಿಲೇಶ್ ಯಾದವ್ ಅವರ ಸಂಪುಟ ಸ್ವಚ್ಛತಾ ಅಭಿಯಾನವನ್ನು ವಿರೋಧಿಗಳು ಅಣಕವಾಡಿಕೊಳ್ಳಲು ಈ ಪ್ರಕರಣ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ತಮ್ಮ ಭಾಷಣದಲ್ಲಿ ಉತ್ತರ ಪ್ರದೇಶದ ಕಾನೂನು ಹಾಗೂ ಸುವ್ಯವಸ್ಥೆ ಸ್ಥಿತಿ ಬಗ್ಗೆ ಉಲ್ಲೇಖಿಸಿ, ಗಾಯತ್ರಿ ಪ್ರಜಾಪತಿ ಮಂತ್ರವನ್ನು ಪ್ರತಿದಿನ ಜಪಿಸುವ ಪಕ್ಷ ಉತ್ತರ ಪ್ರದೇಶದಲ್ಲಿದೆ ಎಂದು ಲೇವಡಿ ಮಾಡಿದ್ದರು.

ಪ್ರಜಾಪತಿ ಹಾಗೂ ಸಹಚರರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೇ, ತನ್ನ 17 ವರ್ಷದ ಮಗಳ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಮಹಿಳೆ ದೂರು ನೀಡಿದ್ದರು. ಪೋಸ್ಕೊ ಕಾಯ್ದೆಯಡಿಯೂ ಪ್ರಜಾಪತಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜಾಪತಿ ಬಂಧನ ಅನಿವಾರ್ಯವಾಗಿದೆ. ದಿಲ್ಲಿಯ ಎಐಐಎಂಎಸ್ನಲ್ಲಿ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin