ಅದೃಷ್ಟ ಅಂದ್ರೆ ಇದೆ ಆಲ್ವಾ ..! ಅಂದು ಚಾಯ್ ವಾಲಾ ಇಂದು ಫ್ಯಾಷನ್ ವಾಲಾ
ಇಸ್ಲಾಮಾಬಾದ್ : ಭಲೇ ಅದೃಷ್ಟವೋ ಅದೃಷ್ಟ. ಕಾಲ ಕೂಡಿ ಬಂದರೆ ಅದೃಷ್ಟ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಪಾಕಿಸ್ತಾನದ ಈ ಚಾಯ್-ವಾಲಾನೇ ಸಾಕ್ಷಿ..! ನೀಲಿಕಣ್ಣುಗಳು ನೀಳ ಮೈಕಟ್ಟಿನ ಈ ಸ್ಪುರದ್ರೂಪಿ ತರುಣ ಯಾವ ಹಾಲಿವುಡ್-ಬಾಲಿವುಡ್ ನಟನಿಗೂ ಕಡಿಮೆ ಇಲ್ಲ. ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ನ ರಸ್ತೆ ಬದಿ ಚಹಾ ಮಾರುವ ಪೆಟ್ಟಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 18ರ ಹರೆಯದ ಅರ್ಷದ್ ಖಾನ್ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡಿತ್ತು. ಸಂಡೇ ಬಜಾರ್ನಲ್ಲಿ ಅಲೆಯುತ್ತಿದ್ದ ಛಾಯಾಗ್ರಾಹಕ ಜಿಯಾ ಆಲಿ ಈ ಯುವಕನನ್ನು ತನ್ನ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿ ಪೇಸ್ಬುಕ್ನಲ್ಲಿ ಹಾಕಿದ. ದಿನಬೆಳಗಾಗುವುದರೊಳಗಾಗಿ ಖಾನ್ ಇಂಟರ್ನೆಟ್ ಸೆನ್ಷೆಷನ್ ಆದ. ಅನೇಕ ಯುವತಿಯರು, ವಿವಾಹಿತ ಸ್ತ್ರೀಯರೂ ಸುರಸುಂದರನ ಮುಗ್ಧ ರೂಪಕ್ಕೆ ಮರುಳಾದರು. ಈ ಫೋಟೋ ಅವರ ಹಣೆಬರಹವನ್ನೇ ಬದಲಿಸಿತು.
ಒಡಹುಟ್ಟಿದ 17 ಜನರ ದೊಡ್ಡ ಕುಟುಂಬದ ನಿರ್ವಹಣೆಗಾಗಿ ಬಿಡಿಗಾಸು ಸಂಪಾದನೆಯ ಟೀ ಮಾರುತ್ತಿದ್ದ ಖಾನ್ ಈಗ ಸಾವಿರಾರು ಜನರ ಹೃದಯ ಗೆದ್ದನಲ್ಲದೇ, ಪಾಕಿಸ್ತಾನದ ಕೆಲವು ಪ್ರತಿಷ್ಠಿತ ಕಂಪನಿಗಳಿಗೆ ರೂಪದರ್ಶಿಯಾಗಿ ಆಯ್ಕೆಯಾಗಿದ್ದಾನೆ. ಅದಕ್ಕಾಗಿ ಸಹಿ ಕೂಡ ಮಾಡಿದ್ದಾನೆ. ಇನ್ನು ಮುಂದೆ ಈ ಛಾಯ್ವಾಲಾ ಜನಪ್ರಿಯ ಬ್ರಾಂಡ್ಗಳ ಫ್ಯಾಷನ್ವಾಲಾ ಅಗಲಿದ್ದಾನೆ ಎಂದು ಮಾಧ್ಯಮಗಳು ಬಣ್ಣಿಸಿವೆ.
► Follow us on – Facebook / Twitter / Google+