ಅಧಿಕಾರಕ್ಕೇರಲು ಹಾತೊರೆಯುತ್ತಿರುವ ಬಿಜೆಪಿಯಿಂದ ಗೇಮ್ ಪ್ಲಾನ್ ತಯಾರಿ, ಸದ್ದಿಲ್ಲದೇ ಷಾ ಕಾರ್ಯಾಚರಣೆ

Amith-Shah-001

ಬೆಂಗಳೂರು, ಜೂ.6- ಕಳೆದುಕೊಂಡಿರುವ ಅಧಿಕಾರವನ್ನು ಮತ್ತೇ ಪಡೆಯುವ ಮೂಲಕ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಪಣ ತೊಟ್ಟಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಅವರ ತಂಡ ರಾಜ್ಯದಲ್ಲಿ ಸದಿಲ್ಲದೆ ಕಾರ್ಯಾರಣೆ ಆರಂಭಿಸಿದೆ. ಈ ಹಿಂದೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಜೊತೆ ಗೆಲುವಿಗೆ ಹಗಲಿರುಳು ಶ್ರಮಿಸಿದ್ದ ಒಂದು ತಂಡ ನಿನ್ನೆಯಷ್ಟೇ ದೇವನಹಳ್ಳಿ ಸಮೀಪದ ಸಾದಹಳ್ಳಿಗೆ ಆಗಮಿಸಿದ್ದು, ಪಕ್ಷದ ಸ್ಥಿತಿಗತಿ ಕುರಿತಂತೆ ಸಮೀಕ್ಷೆ ನಡೆಸಲಿದೆ.ರಾಜ್ಯ ಬಿಜೆಪಿ ನಾಯಕರ ಗಮನಕ್ಕೆ ಗೊತ್ತಾಗದಂತೆ ಈ ತಂಡ ಕಾರ್ಯನಿರ್ವಾಹಿಸಲಿದ್ದು, ಆರ್‍ಎಸ್‍ಎಸ್ ನಾಯಕರು ಮತ್ತೊಂದು ತಂಡ ಇವರಿಗೆ ಸಾಥ್ ನೀಡಲಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಅಭ್ಯರ್ಥಿಗಳ ಆಯ್ಕೆ, ಪಕ್ಷದ ಸ್ಥಿತಿಗತಿ, ರಾಜ್ಯ ಸರ್ಕಾರದ ಬಗ್ಗೆ ಜನರಿಗಿರುವ ಒಲವು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗೆಗಿನ ಅಭಿಪ್ರಾಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮತದಾರರಿಂದ ಮಾಹಿತಿ ಕಲೆ ಹಾಕಲಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆಯುವ ಒಂದು ವರ್ಷಕ್ಕೂ ಮುನ್ನ ಅಮಿತ್ ಷಾ, ತಮ್ಮ ಆಪ್ತ ತಂಡದೊಂದಿಗೆ ಇಂತಹ ರಣತಂತ್ರ ರೂಪಿಸುತ್ತಾ ಬಂದಿದ್ದಾರೆ. ಒಟ್ಟು ಮೂರು ಹಂತಗಳಲ್ಲಿ ಸಮೀಕ್ಷೆ ನಡೆಸಿದ ಬಳಿಕವಷ್ಟೇ ಅಭ್ಯರ್ಥಿ ಆಯ್ಕೆ ಅಂತಿಮವಾಗಲಿದೆ.

ಈ ಹಿಂದೆ ಉತ್ತರಪ್ರದೇಶ, ಉತ್ತರಖಾಂಡ್, ಗೋವಾ ಸೇರಿದಂತೆ ಮತ್ತಿತರ ರಾಜ್ಯಗಲ್ಲಿ ಇದೇ ಮಾದರಿಯನ್ನು ಅನುಸರಿಸಲಾಗಿತ್ತು.ಇದೀಗ ಕರ್ನಾಟಕದಲ್ಲೂ ಈ ತಂತ್ರದ ಮೂಲಕ ಅಧಿಕಾರ ಹಿಡಿಯಲು ಕಮಲ ಪಡೆ ಸಜ್ಜಾಗಿದೆ.

ವಿಲ್ಲಾ ಬಾಡಿಗೆ ಪಡೆದ ತಂಡ :

ದೇವನಹಳ್ಳಿ ಸಮೀಪ ಸಾದಹಳ್ಳಿಯಲ್ಲಿ ವಿಲ್ಲಾ ಬಾಡಿಗೆ ಪಡೆದಿರುವ ಈ ಪರಿಣತರ ತಂಡ ಒಟ್ಟು ಆರು ತಿಂಗಳು ರಾಜ್ಯದಲ್ಲಿ ಪ್ರವಾಸ ಮಾಡಲಿದೆ. ಆರ್‍ಎಸ್‍ಎಸ್ ನಾಯಕರು ಬೆಂಗಳೂರಿನಲ್ಲಿ ಮನೆ ಮಾಡಿದರೆ ಮಾಧ್ಯಮಗಳಿಗೆ ಮಾಹಿತಿ ಬೇಗನೆ ಸೋರಿಕೆಯಾಗಲಿದೆ. ಇದರಿಂದ ಪ್ರತಿಪಕ್ಷಗಳಿಗೂ ಅನುಕೂಲವಾಗಬಹುದೆಂಬ ಕಾರಣಕ್ಕಾಗಿಯೇ ನಗರದ ಹೊರವಲಯದಲ್ಲಿ ವಿಲ್ಲ ಬಾಡಿಗೆ ಪಡೆಯಯಲಾಗಿದೆ. ಇಲ್ಲಿಗೆ ರಾಜ್ಯದ ನಾಯಕರನ್ನು ಕರೆಸಿಕೊಂಡು ಚರ್ಚೆ ನಡೆಸಬಹುದು. ಅಲ್ಲದೇ, ಡಿಸೆಂಬರ್‍ನಲ್ಲಿ ಗುಜರಾತ್  ನಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿಯೂ ಗಮನ ನೀಡಬೇಕಿರುವುದರಿಂದ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿನ ವಿಲ್ಲಾ ಬಾಡಿಗೆ ಪಡೆಯಲು ತೀರ್ಮಾನಿಸಲಾಗಿದೆ.

ಜೊತೆಗೆ ತಂತ್ರದ ಪ್ರತಿ ಅಂಶಗಳ ಬಗ್ಗೆ ಅಮಿತ್ ಷಾ ನಿಗಾವಹಿಸುವರು. ಪದೇ ಪದೇ ಬೆಂಗಳೂರಿಗೆ ಬರಬೇಕಾಗುತ್ತದೆ.ಸಂಚಾರ ದಟ್ಟಣೆಯ ಸಮಸ್ಯೆ ಒಂದೆಡೆಯಾದರೆ,ತಮ್ಮ ಪಕ್ಷದ ರಣತಂತ್ರ ಫಲಿತಾಂಶ ಪ್ರಕಟವಾಗುವವರೆಗೂ ಸೋರಿಕೆಯಾಗಬಾರದೆಂಬ ಎಚ್ಚರಿಕೆಯನ್ನು ವಹಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲು ಪ್ಲಾನ್ ಮಾಡಿರುವ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತï ಶಾ ಇದಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.ಅಮಿತ್ ಶಾ ಬೆಂಗಳೂರಿನಲ್ಲಿಯೇ ಉಳಿಯಲಿದ್ದು, ಇಲ್ಲಿಂದಲೇ ರಣತಂತ್ರ ರೂಪಿಸಲು ಸಿದ್ಧತೆ ನಡೆಸಿದ್ದಾರೆ.  ಇತ್ತೀಚಿಗೆ ಆಡಳಿತರೂಡ ಕಾಂಗ್ರೆಸ್ ಪಕ್ಷದ  ಅಧ್ಯಕ್ಷರ ನೇಮಕಾತಿಯ ವೇಳೆ ಅನುಸರಿಸಿದ ಕಾರ್ಯತಂತ್ರ ಬಿಜೆಪಿಯನ್ನು ನಿದ್ದೇಗೆಡೆಸಿದೆ.ಹೀಗಾಗಿ ವಿಧಾನಸಭಾ ಚುನಾವಣೆಗೆ ಹೀಗಿನಿಂದಲೇ ರಣತಂತ್ರ ಹೆಣೆಯಲು ಸಜ್ಜಾಗಿದೆ.  ಪಕ್ಷ ಗೆದ್ದೇ ಗೆಲ್ಲಿಲಿದೆ ಎಂಬ 150 ಕ್ಷೇತ್ರಗಳಲ್ಲಿ ಹಲವು ಸುತ್ತಿನ ಸಮೀಕ್ಷೆ ನಡೆಸಿ ಅಭ್ಯರ್ಥಿ ಆಯ್ಕೆಯ ಜೊತೆಗೆ ಕೇಂದ್ರ ಸರ್ಕಾರದ ಸಾಧನೆಗಳು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಜನರಿಗಿರುವ ಒಲವು, ಅವರ ಅಲೆ ಮತಗಳಾಗಿ ಪರಿವರ್ತನೆಯಾಗಲಿದಿಯೇ ಎಂಬುದು ಸೇರಿದಂತೆ ಹಲವು ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin