ಅಧಿಕಾರಿಯ ಕಿರುಕುಳ ಆರೋಪ : ನೌಕರ ಆತ್ಮಹತ್ಯೆ ಯತ್ನ

Spread the love

MALURU4

ಮಾಲೂರು, ಫೆ.5-ಅಧಿಕಾರಿಯ ಕಿರುಕುಳಕ್ಕೆ ಮನನೊಂದು ಖಾಸಗಿ ಕಂಪನಿಯ ನೌಕರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.ಪಟ್ಟಣದ ದೊಡ್ಡಮಸೀದಿಯ ಅರುಣ್(25) ಕಳೆದ ಮೂರು ವರ್ಷಗಳಿಂದ ಮುತ್ತೂಟ್ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅಧಿಕಾರಿಯ ಕಿರುಕುಳ ಹೆಚ್ಚಾಗಿ ವರ್ಗಾವಣೆ ಮಾಡಿದ್ದರ ಹಿನ್ನಲೆ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ಪ್ರಜಾ ವೇದಿಕೆಯಿಂದ ಪ್ರತಿಭಟನೆ ಮಾಡಲಾಯಿತು.ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥಗೌಡ ಮಾತನಾಡಿ, ಅರುಣ ಎಂಬಾತನಿಗೆ ಕಿರುಕುಳ ನೀಡಿದ ಅಧಿಕಾರಿಯನ್ನು ವಜಾ ಮಾಡಬೇಕು. ಅರುಣನ ವರ್ಗಾವಣೆಯನ್ನು ತಡೆ ಹಿಡಿಯಬೇಕು, ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಕಂಪನಿಯೇ ಭರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.ಉನ್ನತಾಧಿಕಾರಿ ಇಕ್ಬಾಲ್ ಪ್ರತಿಭಟನಾಕಾರರನನ್ನು ಮವೊಲಿಸಿದ ಬಳಿಕ ಪ್ರತಿಭಟನೆಯನ್ನು ವಾಪಸ್ಸು ಪಡೆಯಲಾಯಿತು. ವಿ.ಪ್ರಸನ್ನ, ಎಂ.ಎಸ್.ರೆಡ್ಡಿ, ರವಿಸುಲ್ತಾನ್, ನವೀನ್, ಮಧು, ನೇತೃತ್ವ ವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin