ಅನಕ್ಷರಸ್ಥರನ್ನು ಬಡ್ಡಿ ಮಾಫಿಯಾದಿಂದ ಪಾರು ಮಾಡಲು ಡಿಸಿಸಿ ಬ್ಯಾಂಕ್ ಶ್ರಮ

Spread the love

Maluru

ಮಾಲೂರು, ಆ.10-ಖಾಸಗಿ ಬಡ್ಡಿ ಮಾಫಿಯಾದಿಂದ ಮಹಿಳೆಯರು, ಅನಕ್ಷರಸ್ಥರು, ಗ್ರಾಮಸ್ಥರನ್ನು ಪಾರು ಮಾಡಲು ಡಿಸಿಸಿ ಬ್ಯಾಂಕ್ ಶೂನ್ಯ ಬಡ್ಡಿ ದರದಲ್ಲಿ ಸಾಲ ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.ಪಟ್ಟಣದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಬ್ಯಾಂಕ್ ವತಿಯಿಂದ ದಿನ್ನೇರಿಹಾರೋಹಳ್ಳಿ ಸಹಕಾರಿ ಸಂಘದ 42ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ 60ಲಕ್ಷ 11ಸಾವಿರ ರೂ ಸಾಲದ ಚೆಕ್‍ನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಕೆಲ ಖಾಸಗಿ ಬ್ಯಾಂಕುಗಳು, ಮೀಟರ್

ಬಡ್ಡಿ ದಂಧೆ ನಡೆಸುವವರ ಸುಳಿಗೆ ಅಮಾಯಕ ಮಹಿಳೆಯರು, ರೈತರು, ಅನಕ್ಷರಸ್ಥರು ಬಲಿಯಾಗುತ್ತಿದ್ದು ಈ ಸಂಚಿನಿಂದ ಬಡ ಜನತೆ ಹಾಗೂ ಸಂಕಷ್ಟದಲ್ಲಿರುವವರ ರಕ್ಷಣೆಗೆ ಡಿಸಿಸಿ ಬ್ಯಾಂಕ್ ಕಾರ್ಯ ಪ್ರವೃತ್ತವಾಗಿದೆ. ಮುಂದಿನ ದಿನಗಳಲ್ಲಿ ಪಾಲಿಹೌಸ್ ನಿರ್ಮಾಣಕ್ಕೂ ಸಾಲ ನೀಡಲಾಗುವುದು ಎಂದರು.ಡಿಸಿಸಿ ಬ್ಯಾಂಕ್ ನಿದೇರ್ಶಕ ಶಂಕರನಾರಾಯಣಗೌಡ, ದ್ಯಾಪಸಂದ್ರ ಸೊಸ್ಶೆಟಿಯ ಅಧ್ಯಕ್ಷ ಆರ್.ಪ್ರಭಾಕರ್, ಎಪಿಎಂಸಿ ಅಧ್ಯಕ್ಷ ದಿನ್ನಹಳ್ಳಿ ರಮೇಶ್, ದಿನ್ನೇರಿಹಾರೋಹಳ್ಳಿ ಸಹಕಾರಿ ಸಂಘದ ಲಘುಮೇಗೌಡ, ಅಧಿಕಾರಿಗಳಾದ ಸತೀಶ್, ಕೃಷ್ಣಪ್ಪ, ಇದ್ದರು.

Facebook Comments

Sri Raghav

Admin