ಅನಾಥಾಶ್ರಮ, ವೃದ್ಧಾಶ್ರಮಗಳಿಗಳಿಗೂ ‘ಅನ್ನ ದಾಸೋಹ’ ಭಾಗ್ಯ

Old-Age--02

ಬೆಂಗಳೂರು, ಜ.11- ರಾಜ್ಯದಲ್ಲಿ ಊಟ, ವಸತಿ ಉಚಿತವಾಗಿ ನೀಡುವ 439 ಅನಾಥಾಶ್ರಮ, ವೃದ್ಧಾಶ್ರಮದಂತಹ ಸಂಸ್ಥೆಗಳಿಗೆ ಅನ್ನದಾಸೋಹ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ ಈ ಯೋಜನೆ ಘೋಷಣೆ ಮಾಡಿದ್ದರು. ಅದರಂತೆ ಅನಾಥಾಶ್ರಮ, ವೃದ್ಧಾಶ್ರಮದಲ್ಲಿರುವ ನಾಲ್ಕೂವರೆ   ಸಾವಿರ ಮಕ್ಕಳು ಹಾಗೂ ಅಶಕ್ತರಿಗೆ ತಿಂಗಳಿಗೆ 15 ಕೆಜಿಯಂತೆ ಅಕ್ಕಿ ನೀಡುವ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿಗಾಗಿ 15 ಲಕ್ಷ ಅರ್ಜಿಗಳು ಬಂದಿದ್ದವು, ಅದರಲ್ಲಿ 11.5 ಲಕ್ಷ ಅರ್ಜಿಗಳ ಪರಿಶೀಲನೆ ಮುಗಿದಿದೆ. ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಅದನ್ನು ತಲುಪಿಸಲಾಗುತ್ತಿದೆ ಎಂದು ಹೇಳಿದರು.

ಮಂಗಳೂರಿನ ಕೋಮುಗಲಭೆಗಳು ರಾಜಕೀಯಪ್ರೇರಿತವಾಗಿವೆ. ಮಂಗಳೂರಿನ ಜನ ಸಂಸ್ಕøತಿಗೆ ಹೆಸರಾದವರು. ಯಾವುದೇ ಪ್ರಚೋದನೆಗೆ ಒಳಗಾಗದೆ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ದೀಪಕ್‍ರಾವ್ ಕೊಲೆ ಪ್ರಕರಣದಲ್ಲಿನ ಆರೋಪಿಯೊಬ್ಬ ನನ್ನ ಜೊತೆ ಊಟ ಮಾಡುತ್ತಿರುವ ಫೋಟೊ ವೈರಲ್ ಆಗಿತ್ತು. ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ಸಾಮಾನ್ಯರು ನಮ್ಮೊಂದಿಗೆ ಊಟಕ್ಕೆ ಕುಳಿತಾಗ ಅವರನ್ನು ಎಬ್ಬಿಸಿ ಕಳುಹಿಸಲು ಸಾಧ್ಯವಾಗುವುದಿಲ್ಲ. ಮುಂದೆ ಅವರು ಯಾವುದಾದರೂ ಆರೋಪದಲ್ಲಿ ಸಿಲುಕಿದರೆ ಅದನ್ನು ನಮಗೆ ತಳಕು ಹಾಕುವುದು ಸರಿಯಲ್ಲ ಎಂದು ಹೇಳಿದರು.

Sri Raghav

Admin