ಅನಾಮಧೇಯ ಬಾಂಬ್ ಬೆದರಿಕೆ ಕರೆ : ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕ

airindiaa
ಕೋಲ್ಕತ್ತಾ, ಸೆ.20- ಏರ್ ಇಂಡಿಯಾ ವಿಮಾನವೊಂದು ಸೋಟಿಸುವುದಾಗಿ ಬಂದ ಫೋನ್ ಕರೆಯಿಂದಾಗಿ ಇಲ್ಲಿನ ನೇತಾಜಿ ಸುಭಾಷ್‌ಚಂದ್ರಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅನಾಮಧೇಯ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಕೋಲ್ಕತ್ತಾ-ಗುವಾಹತಿ ಮಾರ್ಗದ ವಿಮಾನ ಸಂಚಾರ ಎರಡು ಗಂಟೆಗಳ ಕಾಲ ವಿಳಂಬವಾಯಿತು. ಬಾಂಬ್ ಕರೆಯಿಂದಾಗಿ ಇಡೀ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಿ ವ್ಯಾಪಕ ಶೋಧ ನಡೆಸಲಾಯಿತು. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕೂಲಂಕಶ ತಪಾಸಣೆ ನಡೆಸಿದರು. ನಂತರ ಇದು ಹುಸಿ ಬೆದರಿಕೆ ಕರೆ ಎಂದು ಗೊತ್ತಾಯಿತು.

► Follow us on –  Facebook / Twitter  / Google+

Sri Raghav

Admin