ಅನಿಲ ಸೋರಿಕೆಯಾಗಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
ನವದೆಹಲಿ, ಮೇ 6- ಡಿಪೋದಿಂದ ಅನಿಲ ಸೋರಿಕೆಯಾಗಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಅಸ್ಪತ್ರೆಗೆ ಸೇರಿರುವ ಘಟನೆ ಇಂದು ಬೆಳಗ್ಗೆ ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ಸಂಭವಿಸಿದೆ. ತುಘಲಕಾಬಾದ್ನ ರೈಲ್ವೆ ಕಾಲೋನಿಯಲ್ಲಿನ ರಾಣಿ ಝಾನ್ಸಿ ಸರ್ವೋದಯ ಕನ್ಯಾ ವಿದ್ಯಾಲಯದ ಬಳಿ ಇದ್ದ ಡಿಪೋದಿಂದ ಅನಿಲ ಸೋರಿಕೆಯಾಯಿತು. ಬೆಳಗ್ಗೆ 7.35ರಲ್ಲಿ ದೂರವಾಣಿ ಕರೆ ಸ್ವೀಕರಿಸಿದ ದೆಹಲಿ ಫೈರ್ ಸರ್ವಿಸ್ನ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಕಣ್ಣುರಿ ಮತ್ತು ಗಂಟಲು ಕಿರಿಕಿರಿಯಿಂದಾಗಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶಾಲೆಯ ಉಪ ಪ್ರಾಂಶುಪಾಲರು ತಿಳಿಸಿದ್ದಾರೆ. ಅನಿಲ ಸೋರಿಕೆ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >