ಅನುಮಾನಾಸ್ಪದವಾಗಿ ಕರಡಿ ಸಾವು

Beer--01

ಮೈಸೂರು, ಮೇ 22- ಕಾಡಿನಿಂದ ಹೊರ ಬಂದ ಗಂಡು ಕರಡಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕರಡಿಗಳ ಕಾದಾಟದಿಂದ ಗಂಡು ಕರಡಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಹಾದನೂರು ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಇಲ್ಲಿ ಮೃತ ಕರಡಿಯ ದೇಹ ಪತ್ತೆಯಾಗಿದೆ.  ಈ ಸಂಬಂಧ ಸ್ಥಳಕ್ಕೆ ಯಡಿಯಾಲ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಮೃತ ಕರಡಿ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಕರಡಿ ಸಾವಿನ ಕಾರಣ ತಿಳಿದು ಬರಲಿದೆ.

Sri Raghav

Admin