ಅನ್ನದಾತನ ಕುರಿತು ಕಿರುಚಿತ್ರ

5

ಭೀಕರ ಬರಗಾಲ , ಅನಾವೃಷ್ಟಿಯಿಂದ ನಮ್ಮ ದೇಶದಲ್ಲಿ ನೂರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಳೆಯನ್ನು ನಂಬಿ ಬ್ಯಾಂಕ್‍ಗಳಲ್ಲಿ ಸಾಲ ಮಾಡುವ ರೈತ ಮಳೆ ಕೈ ಕೊಟ್ಟ ಸಂದರ್ಭದಲ್ಲಿ ಕಂಗಾಲಾಗುತ್ತಾನೆ.ಸಾಲ ಮರು ಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳಿಂದ ಒತ್ತಡ ಹೆಚ್ಚಾದಾಗ ಮುಂದೆ ದಾರಿ ಕಾಣದೆ ಆ ವ್ಯಕ್ತಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಇಂಥದ್ದೇ ಒಂದು ಕಾನ್ಸಿಪ್ಟ್ ಇಟ್ಟುಕೊಂಡು ನಿರ್ಮಿಸಲಾದ ಕಿರು ಚಿತ್ರವೇ ಅನ್ನದಾತ. ವಚನ ಮನಿಯ ಅವರು ಈ ಕಿರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.ಮಾಗಡಿ ತಾಲ್ಲೂಕಿನ ನೀಲಸಂದ್ರ ಎಂಬ ಹಳ್ಳಿಯಲ್ಲಿ ಈ ಕಿರು ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸಪೂರ್ ಕುಲಕರ್ಣಿ ಹಿನ್ನೆಲೆ ಸಂಗೀತ ಒದಗಿಸಲಾಗಿರುವ ಈ ಕಿರು ಚಿತ್ರದ ಪತ್ರಿಕಾ ಪ್ರದರ್ಶನ ಮೊನ್ನೆ ನೆರವೇರಿತು. ಬೆನಕ ಕಲಾ ತಂಡದಲ್ಲಿ 2 ವರ್ಷ ರಂಗ ತರಬೇತಿ ಪಡೆದ ವಚನ ಮನಿಯ ಒಂದು ತಮಿಳು ಚಲನಚಿತ್ರದಲ್ಲಿ ವಿಲನ್ ಆಗಿಯೂ ಕಾಣಿಸಿಕೊಂಡಿದ್ದಾರೆ. ರೈತರ ಬದುಕು, ಬವಣೆಯನ್ನು ಪ್ರತಿಬಿಂಬಿಸುವ ಅನ್ನದಾತ ಕಿರು ಚಿತ್ರವನ್ನು ಯೂ ಟ್ಯೂಬ್‍ನಲ್ಲಿ ಬಿಡುಗಡೆ ಮಾಡಲಾಗಿದೆ.

ಇದನ್ನು ನೋಡಿದವರು ತಮ್ಮ ಅಭಿಪ್ರಾಯವನ್ನು ಇಲ್ಲಿ ದಾಖಲಿಸಿದರೆ ರೈತರ ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಹುಡುಕಬಹುದು ಎನ್ನುವುದು ನಿರ್ದೇಶಕ ವಚನ್ ಮನಿಯ ಅವರ ಅಭಿಪ್ರಾಯವಾಗಿದೆ. ಬರಗಾಲದ ಬವಣೆಯನ್ನು ಎದುರಿಸುವ ರೈತನಾಗಿ, ಬೋರೇಗೌಡ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಅವರ ತಾಯಿಯಾಗಿ ಭದ್ರಕಾಳಮ್ಮ ಅಭಿನಯಿಸಿದ್ದಾರೆ. ಇನ್ನು ಬ್ಯಾಂಕ್ ಏಜೆಂಟ್ ಆಗಿ ವಿನಯಕುಮಾರ್ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ದತ್ತಣ್ಣ ಆಗಮಿಸಿ ತಂಡಕ್ಕೆ ಶುಭ ಕೋರಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin