ಅಪಘಾತ : ಕಾನ್‍ಸ್ಟೆಬಲ್ ಸಾವು

Spread the love

accident

ಬಾಗಲಕೋಟೆ, ಆ.13- ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾನ್‍ಸ್ಟೆಬಲ್ ಸಾವನ್ನಪ್ಪಿರುವ ಘಟನೆ ಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ನೂರೆಂದಪ್ಪ ರಾಟೋಡ(34) ಮೃತ ಕಾನ್‍ಸ್ಟೆಬಲ್.  ಸಂಜೆ ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ಬಾದಾಮಿ ತಾಲ್ಲೂಕಿನ ಕಗಲಗೊಂಬ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.ಕೆರೂರಿನ ಪಿಎಸ್‍ಐಗೆ ಈತ ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಈ ಸಂಬಂಧ ಕೆರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin