ಅಪ್ಪಳಿಸಲು ಬರುತ್ತಿವೆ 1000 ಕ್ಷುದ್ರಗ್ರಹಗಳು, ಭೂಮಿಯ ಸರ್ವನಾಶ ಖಚಿತ…? (ವಿಡಿಯೋ )

Earth-01

ನವದೆಹಲಿ,ಅ.13-ಜಗತ್ ಪ್ರಳಯ ಸಮೀಪಿಸುತ್ತಿದೆಯೇ? 2012ರಲ್ಲಿ ತಲೆದೋರಿದ್ದ ಇಂಥ ಆತಂಕ ಮತ್ತೆ ದಿಢೀರನೇ ಕಾಣಿಸಿಕೊಂಡಿದೆ. ವಸುಂಧರೆಯ ಒಡಲನ್ನು ನೂಚ್ಚುನೂರು ಮಾಡಬಲ್ಲ ಅಗಾಧ ಸಾಮಥ್ರ್ಯದ ಸುಮಾರು 1000 ಕ್ಷುದ್ರಗ್ರಹಗಳು (ಆಸ್ಟಿರೋಯ್ಡ್ಸ್) ಭೂಮಿಯತ್ತ ಧಾವಿಸುತ್ತಿರುವ ವರದಿಗಳು ಭೂಮಂಡಲ ಸರ್ವನಾಶ ಖಚಿತ ಎಂಬ ಖಗೋಳಶಾಸ್ತ್ರ ತಜ್ಞರ ವಾದಕ್ಕೆ ಮತ್ತಷ್ಟು ಪುಷ್ಟಿ ನೀಡಿವೆ.  ಗಂಟೆಗೆ 60,000 ಮೈಲಿಗಳ ವೇಗದಲ್ಲಿ ಸುಮಾರು ಒಂದು ಸಾವಿರ ಕ್ಷುದ್ರಗ್ರಹಗಳು ಭೂಮಿ ಸನಿಹಕ್ಕೆ ಬರುತ್ತಿವೆ ಎಂಬ ವರದಿಗಳ ಬೆನ್ನಲ್ಲೇ ನಾಲ್ಕು ಮಾರಿಚುಕ್ಕಿಗಳು (ಕ್ಷುದ್ರಗ್ರಹಗಳು) ಮತ್ತು ಬೃಹತ್ ಗಾತ್ರದ ಆಕಾಶಕಾಯಗಳು ಭೂಮಿಗೆ ತೀರಾ ಹತ್ತಿರದಲ್ಲೇ ಹಾದುಹೋದ ಬಗ್ಗೆ ಮಂಗಳವಾರ ವರದಿಯಾಗಿದೆ. ಹೀಗಾಗಿ ಮುಂದಿನ ಕೆಲವು ವರ್ಷಗಳಲ್ಲಿ ಇನ್ನಷ್ಟು ಕ್ಷುದ್ರಗ್ರಹಗಳು ಧರಣಿಯ ಸಮೀಪಕ್ಕೆ ಬಂದು ಅಲ್ಲೋಲ-ಕಲ್ಲೋಲ ಸೃಷ್ಟಿಸುವುದು ಖಚಿತ ಎಂದು ಈ ತಜ್ಞರು ಪ್ರತಿಪಾದಿಸುತ್ತಿದ್ದಾರೆ.

ಭೂಮಿಗೆ ದೊಡ್ಡ ಗಂಡಾಂತರದ ಆತಂಕ ಸೃಷ್ಟಿಸಿರುವ ಬೆನ್ನು ಎಂಬ ಕ್ಷುದ್ರಗ್ರಹದ ಬೆನ್ನಟ್ಟಿರುವ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಈ ನಿಟ್ಟಿನಲ್ಲಿ ಮಹತ್ವದ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ನಿರಂತರವಾಗಿ ಕಾರ್ಯೋನ್ಮುಖವಾಗಿವೆ.  ಭಾರೀ ಕೆಡುಕುಂಟು ಮಾಡುವ ಕ್ಷುದ್ರಗ್ರಹಗಳ ಸಮಗ್ರ ಅಧ್ಯಯನ ಮತ್ತು ಅವುಗಳು ಚಲಿಸುವ ದಿಕ್ಕಿನ ಜಾಡನ್ನು ಪತ್ತೆ ಮಾಡಲು ನಾಸಾ ತನ್ನ ಓಸಿರಿಸ್-ಆರ್‍ಇಎಕ್ ಯೋಜನೆಯಲ್ಲಿ ನಿರತವಾಗಿದೆ. ಕ್ಷುದ್ರಗ್ರಹಗಳು, ಭಯಾನಕ ಉಲ್ಕೆಗಳು, ಅಂತರಿಕ್ಷ ಶಿಲೆಗಳ ಮಾದರಿಗಳನ್ನು ಸಂಗ್ರಹಿಸಿ ಆ ಮೂಲಕ ಅವುಗಳ ಗಾತ್ರ, ಸಾಮಥ್ರ್ಯ ಮತ್ತು ಚಲನೆ ದಿಕ್ಕು-ಇವುಗಳ ಬಗ್ಗೆ ಸಂಶೋಧನೆ ನಡೆಸಿ ಮಹತ್ವದ ಮಾಹಿತಿಗಳನ್ನು ಕಲೆಹಾಕಿದೆ.

ವಸುಂಧರೆಗೆ ಕಂಟಕ ತಂದೊಡ್ಡಬಲ್ಲ ಕ್ಷುದ್ರಗ್ರಹಗಳು, ದೈತ್ಯಾಕಾರದ ಬಂಡೆಗಳು, ಉಲ್ಕೆಗಳು, ಧೂಮಕೇತುಗಳ ಸಂಯೋಜನೆ ಮತ್ತು ರಚನೆಯನ್ನು ತಿಳಿಯಲು ಈ ಸಂಶೋಧನೆ ಸಹಕಾರಿಯಾಗಿದ್ದು, ಇದರಿಂದ ಭವಿಷ್ಯದ ದುಷ್ಪರಿಣಾಮವನ್ನು ನಿಖರವಾಗಿ ಊಹಿಸಲು ಖಗೋಳವಿ ಜ್ಞಾನಿಗಳಿಗೆ ನೆರವಾಗಿದೆ. ಇದರಿಂದ ಗ್ರಹಗಳು ಮತ್ತು ಭೂಮಿಯ ಉಗಮ ಮತ್ತು ಆಯಸ್ಸಿನ ಬಗ್ಗೆಯೂ ಹೆಚ್ಚಿನ ವಿಷಯಗಳನ್ನು ಕಲೆಹಾಕಲು ನೆರವಾಗಿದೆ.

ಇನ್ನೊಂದೆಡೆ ಭೂಮಿಗೆ ಸಮೀಪದಲ್ಲೇ ಈ ಕ್ಷುದ್ರಗ್ರಹಗಳು ಹಾದು ಹೋಗಿರುವುದರಿಂದ ಭವಿಷ್ಯದಲ್ಲಿ ಜಲಪ್ರಳಯ ಖಚಿತ ಎಂದು ಒಂದು ಬಣ ವಾದ ಮಂಡಿಸಿದೆ. ಭವಿಷ್ಯದಲ್ಲಿ ಈ ಅಗಾಧ ಸಾಮಥ್ರ್ಯದ ಅಪಾಯಕಾರಿ ಆಕಾಶಕಾಯಗಳ ದಾಳಿಯ ಪರಿಣಾಮವನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸುವ ಉದ್ದೇಶದಿಂದಲೇ ನಾಸಾ ಈ ಯೋಜನೆಯಲ್ಲಿ ನಿರತವಾಗಿವೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ವಿವರಿಸಿದ್ದಾರೆ.  ಲಕ್ಷಾಂತರ ಪ್ರಭಾ ವರ್ಷಗಳ ಅಂತರದಲ್ಲಿರುವ ಭಾರೀ ಸಂಖ್ಯೆ ಕ್ಷುದ್ರಗ್ರಹಗಳು ಭೂಮಿಯತ್ತ ಶರವೇಗದಲ್ಲಿ ಧಾವಿಸುತ್ತಿದ್ದು, ಇವುಗಳ ಕಕ್ಷೆಯ ದಿಕ್ಕನ್ನು ಬೇರೆಡೆ ಬದಲಿಸಲು ಸಾಧ್ಯವೇ ಎಂಬ ಬಗ್ಗೆಯೂ ಪ್ರಯೋಗ-ಪರೀಕ್ಷೆಗಳು ನಡೆದಿವೆ.

► Follow us on –  Facebook / Twitter  / Google+

Sri Raghav

Admin