ಅಭಿಮಾನಿಗಳಿಗೆ ಚೆನ್ನೈನಲ್ಲಿ ಇಂದೂ ಮುಂದುವರಿದ ತಲೈವಾ ರಜನಿ ದರ್ಶನ

Rajanikantha
ಚೆನ್ನೈ, ಮೇ 16-ತಮಿಳುನಾಡಿನ ಆರಾಧ್ಯ ದೈವ ರಜನಿಕಾಂತ್ ಇಂದು ಕೂಡ ಅಭಿಮಾನಿಗಳಿಗೆ ದರ್ಶನ ನೀಡಿ ಚಿತ್ರರಸಿಕರನ್ನು ಪುಳಕಗೊಳಿಸಿದರು.
ಎಂಟು ವರ್ಷಗಳ ಬಳಿಕ ಅಭಿಮಾನಿಗಳನ್ನು ಮುಖಾಮುಖಿ ಭೇಟಿ ಮಾಡುವ ಕಾರ್ಯಕ್ರಮವನ್ನು ರಜನಿಕಾಂತ್ ಇಂದು ಕೂಡ ಚೆನ್ನೈನಲ್ಲಿ ಮುಂದುವರಿಸಿದರು.
ರಾಘವೇಂದ್ರ ಮಂಟಪದ ಸಭಾಂಗಣದ ವೇದಿಕೆಯ ಮಧ್ಯಭಾಗದಲ್ಲಿ ಶ್ವೇತವಸ್ತ್ರದೊಂದಿಗೆ ರಜನಿ ಆಸೀನರಾಗಿದ್ದರು. ಮೊದಲೇ ಅವಕಾಶ ಪಡೆದ ಅಭಿಮಾನಿಗಳು ಸಾಲುಗಟ್ಟಿ ನಿಂತು ಒಬ್ಬರ ನಂತರ ಒಬ್ಬರು ತಲೈವಾ ಬಳಿ ತೆರಳಿ ಖುಷಿಯಿಂದ ಫೋಟೊ ತೆಗೆಸಿಕೊಂಡರು.  ಪೂರ್ವನಿಗದಿಯಂತೆ ತೂತುಕುಡಿ, ತಿರುನೆಲ್‍ವೆಲಿ, ಶೇನಿ ಸೇರಿದಂತೆ ವಿವಿಧ ಜಿಲ್ಲೆಗಳ ಅಭಿಮಾನಿಗಳು ರಜನಿ ದರ್ಶನ ಪಡೆದರು. ಬಿಳಿಗಡ್ಡಧಾರಿಯಾಗಿ ಸಾಧುವಿನಂತೆ ಕಂಗೊಳಿಸುತ್ತಿದ್ದ ರಜನಿ ಹಸನ್ಮುಖಿಯಾಗಿ ಆಭಿಮಾನಿಗಳನ್ನು ಆತ್ಮೀಯವಾಗಿ ಮಾತನಾಡಿಸಿದರು. ಕೆಲವರು ನೀಡಿದ ಉಡುಗೊರೆಯನ್ನು ಪ್ರೀತಿಯಿಂದ ಸ್ವೀಕರಿಸಿ ತಮ್ಮ ಸುತ್ತ ನೆರದಿದ್ದ ಅಂಗರಕ್ಷಕರಿಗೆ ನೀಡಿದರು.

 
ರಜನಿ ದರ್ಶನದಿಂದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ನಿನ್ನೆಯಿಂದ ರಜನಿ 17 ಜಿಲ್ಲೆಗಳ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಪ್ರತಿ ಜಿಲ್ಲೆಯಿಂದ 250 ಅಭಿಮಾನಿಗಳಿಗೆ ಮಾತ್ರ ಕಾರ್ಯಕ್ರಮದಲ್ಲಿ ಭೇಟಿ ಮಾಡಲು ವಿಸೇಷ ಪಾಸ್ ನೀಡಲಾಗಿದೆ.  ಅನುಮತಿ ಇಲ್ಲದಿದ್ದರೂ ತಮ್ಮ ನೆಚ್ಚಿನ ತಲೈವಾನನ್ನು ನೋಡಲು ದಿಂಡಿಗಲ್, ಕನ್ಯಾಕುಮಾರಿ, ಕರೂರು ಸೇರಿದಂತೆ ವಿವಿಧ ಜಿಲ್ಲೆಗಳ ಅಸಂಖ್ಯಾತ ಅಭಿಮಾನಿಗಳು ಚೆನ್ನೈಗೆ ಧಾವಿಸಿದ್ದಾರೆ. ಇವರನ್ನು ನಿಯಂತ್ರಿಸಲು ಪೋಲೀಸರು ಪರದಾಡುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin