ಅಭ್ಯರ್ಥಿಗಳು ವಾರಕ್ಕೆ 2ಲಕ್ಷ ರೂ. ಹಣ ವಿತ್‍ಡ್ರಾ ಮಾಡಲು ಆರ್‍ಬಿಐಗೆ ಆಯೋಗ ಮನವಿ

Spread the love

Black-Money-RBI

ನವದೆಹಲಿ, ಜ. 26-ವಿಧಾನಸಭೆ ಚುನಾವಣೆಗಳು ನಡೆಯಲಿರುವ ಐದು ರಾಜ್ಯಗಳ ಅಭ್ಯರ್ಥಿಗಳು ವಾರಕ್ಕೆ 2 ಲಕ್ಷ ರೂ.ಗಳನ್ನು ವಿತ್‍ಡ್ರಾ ಮಾಡಲು ಅವಕಾಶ ನೀಡುವಂತೆ ಕೇಂದ್ರ ಚುನಾವಣಾ ಆಯೋಗವು ಭಾರತೀಯ ರಿಸರ್ವ್ ಬ್ಯಾಂಕ್‍ಗೆ (ಆರ್‍ಬಿಐ) ಮನವಿ ಮಾಡಿದೆ.  ಈ ಕುರಿತು ಆರ್‍ಬಿಐಗೆ ಪತ್ರ ಬರೆದಿರುವ ಆಯೋಗವು ಅಭ್ಯರ್ಥಿಗಳ ವಾರದ ನಗದು ವಿತ್‍ಡ್ರಾ ಮಿತಿಯನ್ನು 24,000 ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ ಕೋರಿದೆ.

ಫೆ.8ರಿಂದ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿದ್ದು, ಅಭ್ಯರ್ಥಿಗಳು ಹಣಕಾಸು ಮುಗ್ಗಟ್ಟನ್ನು ಎದುರಿಸುತ್ತಿದ್ಧಾರೆ. ಆದ್ದರಿಂದ ಉಮೇದುವಾರರ ನ್ಯಾಯಬದ್ಧ ಚುನಾವಣಾ ವೆಚ್ಚಗಳಿಗೆ ಅನುಕೂಲವಾಗುವಂತೆ ವಾರದ ನಗದು ಡ್ರಾ ಮಿತಿಯನ್ನು 2 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin