ಅಮಾಯಕನನ್ನು ಠಾಣೆಗೆ ಕರೆ ತಂದು ಹಿಂಸಿಸಿದ್ದಕ್ಕೆ ಲಾಕಪ್ ಡೆತ್ ಆಗಿದೆ : ಶೆಟ್ಟರ್

Spread the love

Gadag--2

ಹುಬ್ಬಳ್ಳಿ, ಫೆ.5– ಅಮಾಯಕರನ್ನು ಠಾಣೆಗೆ ಕರೆತಂದು ಹೊಡೆದು ಬಡಿದು ಮಾಡಿರುವುದಕ್ಕೆ ಲಕ್ಷ್ಮೇಶ್ವರದಲ್ಲಿ ಲಾಕಪ್ ಡೆತ್ ಆಗಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೆಸರಿಗೆ ಮಾತ್ರ ಗೃಹ ಸಚಿವರು. ರಾಜ್ಯದಲ್ಲಿ ಜನರಿಗೆ ಪೊಲೀಸರ ಮೇಲಿನ ಭಯ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರವೇ ಭ್ರಷ್ಟರನ್ನು ರಕ್ಷಣೆ ಮಾಡುತ್ತಿದೆ. ಹೀಗಾಗಿ ಇಂತಹ ಅವ್ಯವಸ್ಥೆ ಉಂಟಾಗಿದೆ. ಈ ಅಧಿವೇಶನದಲ್ಲಿ ಗದಗ ಜಿಲ್ಲೆಯ ಕಪ್ಪತಗುಡ್ಡ, ಬರಗಾಲ ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ನಾಳೆಯಿಂದ ಅಧಿವೇಶನ ಆರಂಭವಾಗಲಿದೆ. ಆದರೆ ಸರ್ಕಾರ ಕೇವಲ ನಾಲ್ಕು ದಿನ ಮಾತ್ರ ಅಧಿವೇಶನ ನಡೆಸಲಿದೆ. 15ದಿನಗಳವರೆಗೂ ಅಧಿವೇಶನ ನಡೆಸಬೇಕೆಂಬುದು ನಮ್ಮ ಒತ್ತಾಯ. ಈ ಸರ್ಕಾರ ಬಂದಾಗಿನಿಂದ 60 ದಿನಗಳವರೆಗೂ ಒಂದು ಬಾರಿಯೂ ಅಧಿವೇಶನ ನಡೆದಿಲ್ಲ ಎಂದು ಟೀಕಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin