ಅಮಾಯಕರ ಮೇಲೆ ಸಚಿವ ರುದ್ರಪ್ಪ ಲಮಾಣಿ ಸೋದರಿಯಿಂದ ಹಲ್ಲೆ
ಹಾವೇರಿ, ಆ.19-ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿಯ ಸಹೋದರಿ ಅವರ ಅಧಿಕಾರ ದರ್ಪದಿಂದ ಅಮಾಯಕರ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಯುವಕನೊಬ್ಬನ ಮೇಲೆ ಸಚಿವರ ಸೋದರಿ ಹಲ್ಲೆ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಿಎಜಿಎಸ್ಎಸ್ ಸಂಸ್ಥೆಯ ನಿರ್ದೇಶಕ ಗೋಪಾಲ ನಾಗಪ್ಪ ಲಮಾಣಿ ಮೇಲೆ ಸಚಿವರ ಸಹೋದರಿ ಹಲ್ಲೆ ನಡೆಸಿ ಅವಾಚ್ಯ ಶಬ್ಧದಿಂದ ನಿಂದಿಸಿದ್ದಾರೆ.
ಈ ಬಗ್ಗೆ ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹಲ್ಲೆಗೊಳಗಾದ ಗೋಪಾಲ್ ಅವರು ಆರೋಪಿಸಿದ್ದಾರೆ. ಜನಸಾಮಾನ್ಯರಿಗೆ ಒಂದು ನ್ಯಾಯ, ಮಂತ್ರಿಗಳ ಸಂಬಂಧಿಕರಿಗೆ ಮತ್ತೊಂದು ನ್ಯಾಯವೇ ಎಂದು ಅವರು ಪ್ರಶ್ನಿಸಿದ್ದಾರೆ.