ಅಮಿತ್ ಷಾ ಬಗ್ಗೆ ಅಪಾರ್ಥ ಬೇಡ, ಅವರು ಯಾವುದೇ ಅಗೌರವ ತೋರಿಲ್ಲ : ನಿರ್ಮಲಾನಂದನಾಥ ಶ್ರೀ

Amit-SHah

ಮಂಡ್ಯ, ಆ.15- ಶ್ರೀಕ್ಷೇತ್ರ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಯಾವುದೇ ರೀತಿಯ ಅಗೌರವ ತೋರಿಲ್ಲ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲ ಮಾಧ್ಯಮಗಳಲ್ಲಿ ಅಮಿತ್ ಷಾ ಅವರು ಸ್ವಾಮೀಜಿ ಎದುರು ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತು ಅಗೌರವ ತೋರಿದ್ದಾರೆಂಬ ವ್ಯಾಪಕ ಟೀಕೆಗಳು ಹರಿದಾಡಿದ್ದವು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಶ್ರೀಗಳು, ಅಮಿತ್ ಷಾ ಅವರು ಶ್ರೀ ಪರಮಾನಂದ ಸರಸ್ವತಿ ಸ್ವಾಮೀಜಿಯವರ ಜತೆ ಚರ್ಚೆಯಲ್ಲಿ ತಲ್ಲೀನರಾಗಿದ್ದರು. ನಾವು ಕಚೇರಿ ಒಳಗೆ ಪ್ರವೇಶಿಸಿದ್ದನ್ನು ಅವರು ಗಮನಿಸಿರಲಿಲ್ಲ. ನನ್ನನ್ನು ನೋಡಿದ ಮೇಲೆ ತಕ್ಷಣ ಎದ್ದು ನಿಂತು ಕಾಲಿಗೆ ನಮಸ್ಕರಿಸಿ ವಂದಿಸಿದರು. ಇದನ್ನು ಕೆಲವರು ತಪ್ಪಾಗಿ ಅರ್ಥೈಸಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಕೀಯದ ಹೊರತಾಗಿಯೂ ಅಮಿತ್ ಷಾ ಅವರು ನಮ್ಮನ್ನು ಈ ಹಿಂದೆ ಹಲವಾರು ಬಾರಿ ಭೇಟಿ ಮಾಡಿದ್ದ ವೇಳೆ ಅತ್ಯಂತ ಗೌರವ ಪೂರ್ವಕವಾಗಿ ನಡೆದುಕೊಂಡಿದ್ದಾರೆ. ನಮ್ಮ ಆಹ್ವಾನವನ್ನು ಗೌರವಿಸಿ ಶ್ರೀಕ್ಷೇತ್ರಕ್ಕೆ ಬಂದಿದ್ದಾರೆ. ಶ್ರೀಕ್ಷೇತ್ರದಲ್ಲಿ ನಡೆದ ಕೃತಿ ಬಿಡುಗಡೆ ಸಮಾರಂಭವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟಿರುವ ಅಮಿತ್ ಷಾ ಮಠಕ್ಕೆ ಅಗೌರವ ತಂದಿದ್ದಾರೆ ಎಂದು ನಾವು ಎಂದಿಗೂ ಭಾವಿಸುವುದಿಲ್ಲ. ಭಕ್ತರು ಈ ರೀತಿ ಭಾವಿಸಬಾರದು ಎಂದು ತಿಳಿಸಿದರು.

Sri Raghav

Admin