ಅಮೆರಿಕದಲ್ಲಿ ಗುಂಡೇಟಿಗೆ ಬಲಿಯಾದ ಶ್ರೀನಿವಾಸ್ ಹೈದರಾಬಾದ್‍ಗೆ, ಇಂದು ಅಂತ್ಯಕ್ರಿಯೆ

Spread the love

Srinivas-Dead-Body--01

ಹೈದರಾಬಾದ್, ಫೆ.28-ಅಮೆರಿಕದಲ್ಲಿ ನಡೆದ ಶೂಟೌಟ್‍ನಲ್ಲಿ ದುಷ್ಕರ್ಮಿ ಗುಂಡೇಟಿಗೆ ಬಲಿಯಾದ ಭಾರತೀಯ ಟೆಕ್ಕಿ ಹೈದರಾಬಾದ್ ಮೂಲದ ಶ್ರೀನಿವಾಸ್ ಕೂಚಿಬೊತ್ಲಾ ಪಾರ್ಥೀವ ಶರೀರವನ್ನು ಇಂದು ಸ್ವದೇಶಕ್ಕೆ ತರಲಾಗಿದ್ದು, ನಗರದ ಜುಬಿಲಿ ಹಿಲ್ಸ್ ಬಳಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಶ್ರೀನಿವಾಸ್ ಕುಟುಂಬದವರು ತಿಳಿಸಿದ್ದಾರೆ.  ಇಂದು ನಸುಕಿನ ಜಾವ ಆಗಮಿಸಿದ ಪಾರ್ಥೀವ ಶರೀರವನ್ನು ಶ್ರೀನಿವಾಸ್ ಪೋಷಕರಾದ ಮಧುಸೂದನ್ ಶಾಸ್ತ್ರಿ , ವರ್ಧಿನಿ ಹಾಗೂ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.  ಬಳಿಕ ಹೈದರಾಬಾದ್‍ನ ಹೊರವಲಯದಲ್ಲಿರುವ ಬಚುಪಲ್ಲಿಯಲ್ಲಿರುವ ನಿವಾಸಕ್ಕೆ ಆ್ಯಂಬುಲೆನ್ಸ್ ಮೂಲಕ ಪಾರ್ಥೀವ ಶರೀರ ತರಲಾಯಿತು. ಶ್ರೀನಿವಾಸ್ ಪತ್ನಿ ಸುನಯನಾ ಧುಮ್ಲಾ ಹಾಗೂ ಸಹೋದರ, ಆಕೆಯ ಅತ್ತಿಗೆ, ಕೆಲ ಸಂಬಂಧಿಗಳು ವಿಮಾನದಲ್ಲಿ ಆಗಮಿಸಿದ್ದರು.

ಇನ್ನು ಶ್ರೀನಿವಾಸ್‍ನ ಅಂತಿಮ ದರ್ಶನ ಪಡೆಯಲು ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ತೆಲಂಗಾಣ ಸರ್ಕಾರದ ವತಿಯಿಂದ ಸಾರಿಗೆ ಸಚಿವ ಮಹೇಂದ್ರರೆಡ್ಡಿ ಹಾಗೂ ಆಡಳಿತ ವಿಪಕ್ಷ ನಾಯಕರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin