ಅಮೆರಿಕದಲ್ಲಿ ಭಾರತ-ವೆಸ್ಟ್ ಇಂಡೀಸ್ ಚುಟುಕು ಕ್ರಿಕೆಟ್ ಪಂದ್ಯ
ಫ್ಲೋರಿಡಾ,ಆ.25-ಟೆಸ್ಟ್ ಸರಣಿ ಗೆದ್ದು ವಿಶ್ವಾಸದ ಅಲೆಯಲ್ಲಿ ತೇಲಾಡುತ್ತಿರುವ ಪ್ರವಾಸಿ ಭಾರತ ತಂಡ ಇದೇ ಮೊದಲ ಬಾರಿಗೆ ಅಮೆರಿಕದ ಫ್ಲೋರಿಡಾದಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಎರಡು ಟಿ-20 ಪಂದ್ಯಗಳನ್ನು ಎದುರಿಸಲಿದೆ. ಆ.27 ಹಾಗೂ 28ರಂದು ಎರಡು ಟಿ-20 ಪಂದ್ಯಗಳು ನಡೆಯಲಿದ್ದು , ಅತಿಹೆಚ್ಚಾಗಿ ಫುಟ್ಬಾಲ್ ಮತ್ತು ಟೆನಿಸ್ ಅಭಿಮಾನಿಗಳಿರುವ ಅಮೆರಿಕದಲ್ಲಿ ಪ್ರಪ್ರಥಮವಾಗಿ ಕ್ರಿಕೆಟ್ ನಡೆಯಲಿದ್ದು, ಇದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಹೀಗಾಗಿ ವೀಕೆಂಡ್ನಲ್ಲಿ ನಡೆಯಲಿರುವ ಪಂದ್ಯಗಳು ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲಿದೆ.
► Follow us on – Facebook / Twitter / Google+
Facebook Comments