ಅಮೆರಿಕದ ಟಿವಿ ಧಾರಾವಾಹಿ ‘ಕ್ವಾಂಟಿಕೋ’ ಶೂಟಿಂಗ್‍ನಲ್ಲಿ ವೇಳೆ ಪ್ರಿಯಾಂಕ ಚೋಪ್ರಾ ತಲೆಗೆ ಪೆಟ್ಟು

sdPriyanka-01

ನ್ಯೂಯಾರ್ಕ್, ಜ.14-ಅಮೆರಿಕದ ಜನಪ್ರಿಯ ಟಿವಿ ಧಾರಾವಾಹಿ ಕ್ವಾಂಟಿಕೋ ಚಿತ್ರೀಕರಣದ ವೇಳೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಲೆಗೆ ಪೆಟ್ಟು ಬಿದ್ದಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ.  ಅಮೆರಿಕ ಬೇಹುಗಾರಿಕೆ ಸಂಸ್ಥೆ ಎಫ್‍ಬಿಐ ಕುರಿತ ಕ್ವಾಂಟಿಕೋ ಟಿವಿ ಸೀರಿಯಲ್‍ನ ಸಾಹಸ ದೃಶ್ಯದ ಶೂಟಿಂಗ್ ಸಂದರ್ಭದಲ್ಲಿ ಕೆಳಗೆ ಬಿದ್ದ ಪ್ರಿಯಾಂಕಾ ಅವರ ತಲೆಗೆ ಪೆಟ್ಟು ಬಿದ್ದಿತು. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಕೆಲಕಾಲ ಅಲ್ಲೇ ವಿಶ್ರಾಂತಿ ಪಡೆದ ಅವರು ನ್ಯೂಯಾರ್ಕ್‍ನಲ್ಲಿರುವ ತಮ್ಮ ಪ್ಲಾಟ್‍ಗೆ ಹಿಂದಿರುಗಿದ್ದಾರೆ. ಕೆಲವು ದಿನಗಳ ಕಾಲ ಅವರು ವಿಶ್ರಾಂತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಿಯಾಂಕ ಚೋಪ್ರಾ ಕಳೆದ ನಾಲ್ಕು ದಿನಗಳ ಹಿಂದೆ ಲಾಸ್ ಏಂಜಲೀಸ್‍ನಲ್ಲಿ ನಡೆದ 74ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡು ಗಮನಸೆಳೆದಿದ್ದರು. ಅಲ್ಲದೇ ಕಾರ್ಯಕ್ರಮ ನಿರೂಪಿಸಿ, ಪ್ರಶಸ್ತಿ ಪ್ರದಾನ ಸಹ ಮಾಡಿದ್ದರು. ಅತ್ಯುತ್ತಮ ವಸ್ತ್ರ ವಿನ್ಯಾಸ ಪ್ರಶಸ್ತಿಗೂ ಭಾಜನರಾಗಿದ್ದರು. ಕ್ವಾಂಟಿಕೋ ಟಿವಿ ಸೀರಿಯಲ್‍ನಲ್ಲಿ ಬ್ಯುಸಿಯಾಗಿರುವ 34 ವರ್ಷದ ಪ್ರಿಯಾಂಕಾ ಬೇವಾಚ್ ಮೂಲಕ ಹಾಲಿವುಡ್‍ಗೂ ಪ್ರವೇಶಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin