ಅಮೆರಿಕಾಗೆ ದೇಶಿ ಪ್ರಜೆಗಳನ್ನು ಕಳ್ಳಸಾಗಣೆ ಮಾಡಿದ ಇಬ್ಬರು ಭಾರತೀಯರಿಗೆ 17 ತಿಂಗಳು ಜೈಲು
ವಾಷಿಂಗ್ಟನ್, ಮಾ.22- ಅಮೆರಿಕಾಗೆ ವಿದೇಶಿ ಪ್ರಜೆಗಳನ್ನು ಕಳ್ಳಸಾಗಣೆ ಮಾಡಿದ ಆಪಾದನೆಗಾಗಿ ಅಮೆರಿಕದ ಫೆಡರಲ್ ನ್ಯಾಯಾಲಯವೊಂದು ಇಬ್ಬರು ಭಾರತೀಯರಿಗೆ 17 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಕಮರ್ಷಿಯಲ್ ಏರ್ಲೈನ್ ವಿಮಾನಗಳ ಮೂಲಕ ಅಮೆರಿಕಾಗೆ ವಿದೇಶಿ ಪ್ರಜೆಗಳನ್ನು ಕಳ್ಳಸಾಗಣೆ ಮಾಡಲು ಪಿತೂರಿ ನಡೆಸಿದ ಆರೋಪಕ್ಕಾಗಿ ನಿಲೇಶ್ ಕುಮಾರ್ ಪಟೇಲ್(42) ಮತ್ತು ಹರ್ಷದ್ ಮೆಹ್ತಾ (67) ಅವರಿಗೆ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಂಗ ಇಲಾಖೆಯ ಉಸ್ತುವಾರಿ ಅಟಾರ್ನಿ ವಿಲಯಂ ಇ. ಫಿಟ್ಜ್ಪ್ಯಾಟ್ರಿಕ್ ಹೇಳಿದ್ದಾರೆ. ಇವರ ಮೇಲಿನ ಆಪಾದನೆ ಕಳೆದ ಜನವರಿಯಲ್ಲಿ ಸಾಬೀತಾಗಿತ್ತು. ನ್ಯೂಆರ್ಕ್ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶ ಮಾರ್ಟಿನಿ ಇಬ್ಬರು ಭಾರತೀಯರಿಗೆ ನಿನ್ನೆ ಜೈಲು ಶಿಕ್ಷೆ ವಿಧಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >