ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪ್ರವಾಸ ರದ್ದು

clintonನ್ಯೂಯಾರ್ಕ್, ಸೆ. 12-ಡೆಮೊಕ್ರಾಟಿಕ್ ಪಕ್ಷದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ನ್ಯುಮೋನಿಯಾದಿಂದ ಬಳಲುತ್ತಿದ್ದು, ಕ್ಯಾಲಿಫೋರ್ನಿ ಪ್ರವಾಸ ರದ್ದುಗೊಳಿಸಿದ್ದಾರೆ.  ನ್ಯೂಯಾರ್ಕ್‌ನಲ್ಲಿ ನಿನ್ನೆ 9/11ರ ಭಯೋತ್ಪಾದನೆ ದಾಳಿ ಕರಾಳ ನೆನಪು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿಲರಿ ಅಸ್ವಸ್ಥರಾದರು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅಲರ್ಜಿಗೆ ಸಂಬಂಧಪಟ್ಟ ಕೆಮ್ಮು ಮತ್ತು ನ್ಯುಮೋನಿಯಾ ಇರುವುದು ಕಂಡುಬಂದಿತು. ಹಣ ಸಂಗ್ರಹಕ್ಕಾಗಿ ಕ್ಯಾಲಿಫೋರ್ನಿಯಾಗೆ ತೆರಳಬೇಕಿದ್ದ ತಮ್ಮ ಪ್ರವಾಸವನ್ನು ಅವರು ರದ್ದುಗೊಳಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin