ಅಮೆರಿಕ ಕಾಂಗ್ರೆಸ್ ಸದಸ್ಯರಾಗಿ ಐವರು ಭಾರತೀಯರ ಪ್ರಮಾಣ ವಚನ ಸ್ವೀಕಾರ

5-indian-c

ವಾಷಿಂಗ್ಟನ್, ಜ.4- ಅಮೆರಿಕದ ಕಾಂಗ್ರೆಸ್ ಸದಸ್ಯರಾಗಿ ಭಾರತೀಯ ಮೂಲದ ಐವರು ಇಂದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅಮೆರಿಕ ಜನಸಂಖ್ಯೆಯಲ್ಲಿ ಕೇವಲ ಶೇಕಡ ಒಂದರಷ್ಟಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಇದು ಹೆಗ್ಗಳಿಕೆಯ ವಿಷಯವಾಗಿದೆ.
ಕ್ಯಾಲಿಫೋರ್ನಿಯಾದ ಸೆನೆಟರ್ (ಸಂಸದೆ) ಆಗಿ 52 ವರ್ಷದ ಕಮಲಾ ಹ್ಯಾರಿಸ್, ಮತ್ತು ಅಮೆರಿಕದ ಪ್ರತಿನಿಧಿಗಳ ಸದನಕ್ಕೆ ಆಯ್ಕೆಯಾಗಿರುವ ಪ್ರಥಮ ಭಾರತೀಯ ಮೂಲದ ಮಹಿಳೆ 51 ವರ್ಷದ ಪ್ರಮೀಳಾ ಜಯಪಾಲ್ ಕಾಂಗ್ರೆಸ್ ಸದಸ್ಯರಾಗಿ ಅಧಿಕಾರ ವಹಿಸಿಕೊಂಡರು.

ಇವರೊಂದಿಗೆ ಅಮಿ ಬೆರಾ, ರೋ ಖನ್ನಾ ಮತ್ತು ರಾ ಜಾ ಕೃಷ್ಣಮೂರ್ತಿ ಅವರು ಸಹ ಪ್ರಮಾಣ ವಚನ ಸ್ವೀಕರಿಸಿದ್ದಾರೆ.  ಇದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅಮೆರಿಕದಲ್ಲಿರುವ ಭಾರತೀಯ ಮೂಲಕ ಅನೇಕ ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin